Politics

*ಸಿದ್ದರಾಮಯ್ಯ ಅನುಮತಿ ನೀಡಿದ್ರೆ ನಾನು ಸಿಎಂ ಆಗ್ತೀನಿ ಎಂದ ದೇಶಪಾಂಡೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಮಾತು ಆಗಾಗ ಕೇಳಿಬರುತ್ತಿದೆ. ಅದರಲ್ಲಿಯೂ ಮುಡಾ ಹಗರಣ ಬೆಳಕಿಗೆ ಬಂದ ಬಳಿಕ ಸಿಎಂ ಬದಲಾವಣೆಗಾಗಿ ವಿಪಕ್ಷಗಳು ಆಗ್ರಹಿಸಿವೆ. ಈ ಮಧ್ಯೆ ಕಾಂಗ್ರೆಸ್ ಹಿರಿಯ ಶಾಸಕರೊಬ್ಬರು ತಾವೂ ಸಿಎಂ ಆಗಬೇಕು ಎಂಬ ಮನದಾಸೆಯನ್ನು ಬಹಿರಂಗವಾಗಿ ಹೊರಹಾಕಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ, ಶಾಸಕ ಆರ್.ವಿ.ದೇಶಪಾಂಡೆ, ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಸಿಎಂ ಆಗ್ತೀನಿ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

Home add -Advt

ಹಾಗಂತ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ. ಅಂತಹ ಚರ್ಚೆಯೂ ಇಲ್ಲ. ಆದರೆ ಮಾತಿಗೆ ಹೇಳುತ್ತಿದ್ದೇನೆ. ಜೀವನದಲ್ಲಿ ಮಹತ್ವಾಕಾಂಕ್ಷೆ ಇರಬೇಕು. ಸಿದ್ದರಾಮಯ್ಯ ಅವರಿಗಿಂತ ವಯಸ್ಸಿನಲ್ಲಿ ನಾನು ದೊಡ್ಡವನು. ಹೈಕಮಾಂಡ್ ಕೊಟ್ಟರೂ ಸಿದ್ದರಾಮಯ್ಯ ಅನುಮತಿ ಕೊಡ್ಬೇಕು. ಸಿದ್ದರಾಮಯ್ಯ ಅನುಮತಿ ನೀಡಿದರೆ ಸಿಎಂ ಆಗ್ತೀನಿ ಎಂದು ಹೇಳಿದರು.

Related Articles

Back to top button