Karnataka NewsPolitics

*ಗೃಹಲಕ್ಷ್ಮೀ ಹಣದಿಂದ ಹಸು ಖರೀದಿಸಿದ ರೈತ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯಡಿ ಬರುವ ಮಾಸಿಕ ಎರಡು ಸಾವಿರ ಹಣದಿಂದ ಮಹಿಳೆಯರಿಗೆ ಹಲವು ರೀತಿಯ ಅನುಕೂಲಗಳಾಗಿವೆ. ಗೃಹಲಕ್ಷ್ಮೀ ಹಣವನ್ನು ಮಹಿಳೆಯರು ಅನೇಕ ರೀತಿಯಲ್ಲಿ ಬಳಸಿಕೊಂಡಿರುವ ಉದಾಹರಣೆಗಳು ಕಂಡು ಬಂದಿದೆ.

ಅದೇ ರೀತಿ ಇದೀಗ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕುಂದೂರು ಗ್ರಾಮದ ವಿಶಾಲಾಕ್ಷಿ ಎಂಬ ರೈತ ಮಹಿಳೆ ಗೃಹಲಕ್ಷ್ಮಿ ಯೋಜನೆಯ ಕಂತುಗಳ ಹಣವನ್ನು ಕೂಡಿಟ್ಟು ಹಸುವನ್ನು ಖರೀದಿಸಿದ್ದಾರೆ.

18 ಕಂತಿನ ಹಣ ಕೂಡಿಟ್ಟು ರೈತ ಮಹಿಳೆ 36 ಸಾವಿರ ರೂ. ನೀಡಿ ಹಸು ಖರೀದಿಸುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಸರ್ಕಾರದ ಈ ಯೋಜನೆಗಳಿಂದ ಕುಟುಂಬ ನಿರ್ವಹಣೆಗೆ ಸಹಾಯವಾಗಿದೆ ಎಂದಿದ್ದಾಳೆ.

ಸಿಎಂ ಸಿದ್ದರಾಮಯ್ಯ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಅವರಿಗೆ ವಿಶಾಲಾಕ್ಷಿ ಇದೇ ವೇಳೆ ಧನ್ಯವಾದ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button