Latest

ವಾಯುವಿಹಾರಕ್ಕೆ ತೆರಳಿದ್ದ ದಂಪತಿಗೆ ಕಾರು ಡಿಕ್ಕಿ; ಪತಿ ಸ್ಥಳದಲ್ಲೇ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ರಾಯಚೂರು: ವಾಕಿಂಗ್ ತೆರಳಿದ್ದ ದಂಪತಿಗೆ ಕಾರು ಡಿಕ್ಕಿಹೊಡೆದು ಪತಿ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಯಚೂರು ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯದ ಬಳಿ ನಡೆದಿದೆ.

ರಾಯಚೂರು ಕಂದಾಯ ಇಲಾಖೆ ನಿವೃತ್ತ ಸರ್ವೇಯರ್ ಎಸ್.ಎಸ್.ಪಾಟೀಲ್ (65) ಮೃತ ದುರ್ದೈವಿ.

ಎಸ್.ಎಸ್.ಪಾಟೀಲ್ ಹಾಗೂ ಅವರ ಪತ್ನಿ ಲೇಪಾಕ್ಷಮ್ಮ ವಾಯುವಿಹಾರಕ್ಕೆ ತೆರಳಿದ್ದ ವೇಳೆ ವೇಗವಾಗಿ ಬಂದ ಕಾರು ದಂಪತಿಗಳಿಗೆ ಡಿಕ್ಕಿ ಹೊಡೆದಿದೆ. ಎಸ್ ಎಸ್ ಪಾಟೀಲ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಅವರ ಪತ್ನಿ ಲೇಪಾಕ್ಷಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಯಚೂರು ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊರೊನಾ ಲಸಿಕೆ ಕಡ್ಡಾಯವಲ್ಲ; ಸುಪ್ರೀಂ ಗೆ ಅಫಿಡವಿಟ್ ಸಲ್ಲಿಸಿದ ಕೇಂದ್ರ

Related Articles

Back to top button