Latest

ಕುಸಿಯುವ ಭೀತಿಯಲ್ಲಿ ಕೃಷ್ಣಾ ಸೇತುವೆ; ಆತಂಕದಲ್ಲಿಯೇ ಸಂಚರಿಸುತ್ತಿರುವ ಜನರು

ಪ್ರಗತಿವಾಹಿನಿ ಸುದ್ದಿ; ರಾಯಚೂರು: ರಾಯಚೂರು ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ 50 ವರ್ಷ ಹಳೆಯದಾದ ಬೃಹತ್ ಸೇತುವೆ ಶಿಥಿಲಾವಸ್ಥೆ ತಲುಪಿದ್ದು, ಕುಸಿದು ಬೀಳುವ ಭೀತಿ ಎದುರಾಗಿದೆ.

ಇತ್ತೀಚಿನ ಪ್ರವಾಹದಿಂದಾಗಿ ಸೇತುವೆ ಸಂಪೂರ್ಣ ನಲುಗಿದ್ದು, ಹಲವೆಡೆ ಬಿರುಕುಬಿಟ್ಟಿದೆ. ಸೇತುವೆಯ ತಳಭಾಗದಲ್ಲಿ ಕಾಂಕ್ರಿಟ್ ಮಣ್ಣು ಕುಸಿಯುತ್ತಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು ಹೊಸ ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿದ್ದಾರೆ.

ಈಗಗಾಲೇ ಹಲವುಬಾರಿ ರಾಜ್ಯ ಸರ್ಕಾರಕ್ಕೆ ಹೊಸ ಸೇತುವೆ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ. ಒಂದೊಮ್ಮೆ ಸೇತುವೆ ಕುಸಿದು ಬಿದ್ದರೆ ಕರ್ನಾಟಕ-ತೆಲಂಗಾಣ ಸಂಪರ್ಕ ಕಡಿತಗೊಳ್ಳಲಿದೆ. ಒಟ್ಟಾರೆ ಅಪಾಯದ ಭೀತಿಯಲ್ಲಿಯೇ ಸೇತುವೆ ಮೇಲೆ ವಾಹನ ಸವಾರರು, ಸಾರ್ವಜನಿಕರು ಓಡಾಟ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button