ಪ್ರಗತಿವಾಹಿನಿ ಸುದ್ದಿ: ರೈಲ್ವೆ ಎಂಜಿನ್ ಅಳವಡಿಸುವಾಗ ದುರಂತವೊಂದು ಸಂಭವಿದ್ದು, ರೈಲ್ವೆ ಎಂಜಿನ್ ಹಾಗೂ ಕೋಚ್ ನಡುವೆ ಸಿಲುಕಿ ರೈಲ್ವೆ ಉದ್ಯೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಿಹಾರದ ಬೇಗುಸರಾಯ್ ಜಿಲ್ಲೆಯ ಬರೌನಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 25 ವರ್ಷದ ಅಮರ್ ಕುಮಾರ್ ಮೃತ ನೌಕರ. ರೈಲ್ವೆ ಡಿಗ್ರೂಪ್ ನೌಕರನಾಗಿದ್ದ ಅಮರ್ ಕುಮಾರ್ ಲಖನೌ-ಬರೌನಿ ಎಕ್ಸ್ ಪ್ರೆಸ್ ರೈಲಿನ ಎಂಜಿನ್ ಹಾಗೂ ಕೋಚ್ ನ್ನು ಜೋಡಿಸುತ್ತಿದ್ದರು. ಈ ವೇಳೆ ಪಾಯಿಂಟ್ ಮೆನ್ ಗಳ ನಿರ್ಲಕ್ಷ್ಯದಿಂದಾಗಿ ರೈಲ್ವೆ ಎಂಜಿನ್ ಹಾಗೂ ಕೋಚ್ ಗಳ ನಡುವೆ ಸಿಲುಕಿದ್ದಾರೆ.
ಘಟನಾ ಸ್ಥಳದಲ್ಲೇ ಅಮರ್ ಕುಮಾರ್ ಮೃತಪಟ್ಟಿದ್ದಾರೆ. ರೈಲ್ವೆ ಸಹದ್ಯೋಗಿಗಳ ಎಡವಟ್ಟಿನಿಂದಾಗಿ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ