ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡ ಸೇರಿದಂತೆ ಸುತ್ತಮೂತ್ತ ಗುರುವಾರ ಸುರಿದ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದ ನೀರು ದೇವಸ್ಥಾನದ ಒಳಗೆ ನುಗ್ಗಿದೆ.
ನಿರಂತರವಾಗಿ ಸುರಿದ ಮಳೆಯಿಂದ ಸುತ್ತಲಿನ ಗುಡ್ಡಗಳಿಂದ ಹರಿದು ಬಂದ ನೀರು ಅಲ್ಲಿನ ಎಣ್ಣೆಹೊಂಡ ಸೇರಿತು. ಹೊಂಡ ತುಂಬಿದ ಬಳಿಕ ದೇವಸ್ಥಾನದ ಪ್ರಾಂಗಣಕ್ಕೂ ನುಗ್ಗಿತು. ಹಾಗಾಗಿ ದೇವಿ ದರ್ಶನಕ್ಕಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬಂದಿದ್ದ ಭಕ್ತರು ಪರದಾಡಿದರು. ಈ ಹಿಂದೆ ಎಣ್ಣೆ ಹೊಂಡ ತುಂಬಿ ಹರಿದರೂ, ಮಳೆ ನೀರು ಸರಾಗವಾಗಿ ಹರಿದುಹೋಗುತ್ತಿತ್ತು. ಆದರೆ, ಈ ಬಾರಿ ಚರಂಡಿಗಳು ಬ್ಲಾಕ್ ಆಗಿದ್ದರಿಂದ ದೇವಸ್ಥಾನಕ್ಕೆ ನೀರು ನುಗ್ಗಿದೆ.
ಮಳೆಯ ಹಿನ್ನೆಲೆ ದೇವಿಯ ದೇವಸ್ಥಾನದ ಸುತ್ತಮುತ್ತ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅಲ್ಲದೆ ನೀರಿನ ಹರಿವು ಹೆಚ್ಚಾಗಿದ್ದಕ್ಕೆ ದೇವಸ್ಥಾನದ ಸುತ್ತಮುತ್ತ ಇದ್ದ ಅಂಗಡಿ ಮುಂಗಟ್ಟುಗಳಲ್ಲಿ ಭಕ್ತರು ನಿಂತಿದ್ದ ದೃಶ್ಯಗಳು ಕಂಡು ಬಂದವು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ