Latest

*ಉತ್ತರಾಖಂಡದಲ್ಲಿ ದುರಂತ ಪ್ರಕರಣ: ಮೂವರು ಚಾರಣಿಗರ ಮೃತದೇಹ ಬೆಂಗಳೂರಿಗೆ; ಕುಟುಂಬಕ್ಕೆ ಹಸ್ತಾಂತರ*

ಪ್ರಗತಿವಾಹಿನಿ ಸುದ್ದಿ: ಉತ್ತರಾಖಂಡನ ಉತ್ತರ ಕಾಶಿಯಲ್ಲಿ ಚಾರಣಕ್ಕೆ ತೆರಳಿದ್ದ ರಾಜ್ಯದ 9 ಜನರು ದಿಡಿರ್ ಹಿಮಪಾತದಿಂದಾಗಿ ಸಾವನ್ನಪ್ಪಿದ್ದು, ಅವರಲ್ಲಿ ಮೂವರು ಕನ್ನಡಿಗರ ಮೃತದೇಹವನ್ನು ಬೆಂಗಳೂರಿಗೆ ರವಾನಿಸಲಾಗಿದೆ.

Home add -Advt

ಅದ್ಮಿನಿ ಹೆಗಡೆ, ವೆಂಕಟೇಶ್ ಪ್ರಸಾದ್ ಕೆ, ಆಶಾ ಎಂಬುವವರ ಮೃತದೇಹ ಬೆಂಗಳೂರಿಗೆ ಆಗಮಿಸಿದೆ. ಪದ್ಮಿನಿ ಹೆಗಡೆ (35) ಮೂಲತಃ ಸುತ್ತರ ಕನ್ನಡ ಜಿಲ್ಲೆಯ ಶಿರಸಿಯವರಾಗಿದ್ದು, ಬೆಂಗಳೂರಿನ ಗೂಗಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿಂದೆಯೂ ಹಲವು ಬಾರಿ ಚಾರಣಕ್ಕೆ ಯಶಸ್ವಿಯಾಗಿ ಹೋಗಿ ಬಂದಿದ್ದು, ಆದರೆ ಈ ಬಾರಿ ಚಾರಣಕ್ಕೆ ತೆರಳಿದ್ದ ವೇಳೆ ದುರಂತಕ್ಕೀಡಾಗಿದ್ದಾರೆ.

ಇದೀಗ ಮೂವರ ಮೃತದೇಹ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಉಳಿದ ಮೃತದೇಹ ಮಧ್ಯಾಹ್ನದ ಬಳಿಕ ಆಗಮಿಸುವ ಸಾಧ್ಯತೆ ಇದೆ.

Related Articles

Back to top button