*ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಲಿಂಕ್; ಕೆ ಇ ಆರ್ ಸಿ ಆದೇಶ ಕೂಡಲೇ ರದ್ದುಗೊಳಿಸುವಂತೆ ರೈತ ಸಂಘಟನೆ ಒತ್ತಾಯ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ 40 ಲಕ್ಷ ಕೃಷಿ ರೈತರು ಕೃಷಿ ಉತ್ಪನ್ನಗಳನ್ನು ಕಷ್ಟದಲ್ಲಿ ಬೆಳೆದು ನಷ್ಟ ಅನುಭವಿಸುತ್ತಿದ್ದಾರೆ. ಆಧಾರ್ ಲಿಂಕ್ ಮಾಡಿದರೆ ಸಬ್ಸಿಡಿ ನೀಡುವುದಾಗಿ ಇಲ್ಲವೇ ಉಚಿತ ವಿದ್ಯುತ್ ನಿಲ್ಲಿಸುತ್ತೇವೆ ಎಂದು ಕೆ ಇ ಆರ್ ಸಿ ಆದೇಶ ಮಾಡಿರುವುದು ಸರಿಯಲ್ಲ ಕೂಡಲೇ ವಾಪಸ್ ಪಡೆಯಬೇಕು. ಇಲ್ಲ ಮುಖ್ಯಮಂತ್ರಿಗಳೇ ಈ ಆದೇಶವನ್ನು ರದ್ದುಗೊಳಿಸಬೇಕು ಎಂದು ರಾಜ್ಯದ ರೈತ ಮುಖಂಡರು ವಿಧಾನಸೌಧದಲ್ಲಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್, ಮೇ 24ರಂದು ನೂತನ ಮುಖ್ಯಮಂತ್ರಿಗಳನ್ನು ಬೆಂಗಳೂರು ವಿಧಾನಸೌಧದಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ ರಾಜ್ಯದ ರೈತರ ಪ್ರಮುಖ ಸಮಸ್ಯೆಗಳ ಬಗ್ಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ ಎಂದರು.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಡಾ ಸ್ವಾಮಿನಾಥನ್ ವರದಿಯಂತೆ ನಿಗದಿ ಮಾಡಿ ಶಾಸನಾತ್ಮಕ ಕಾನೂನು ಜಾರಿ ಮಾಡಬೇಕು ಬೆಲೆ ಕುಷಿತವಾದಾಗ ಕೃಷಿ ಉತ್ಪನ್ನಗಳ ಖರೀದಿ ಖಾತರಿ ನೀಡಬೇಕು ಎಂದರು.
ಕೃಷಿ ಉತ್ಪನ್ನಗಳನ್ನು ಸರ್ಕಾರದ ಅಂಗ ಸಂಸ್ಥೆಗಳಾದ ಆಸ್ಪತ್ರೆ ವಿದ್ಯಾರ್ಥಿ ನಿಲಯ ಜೈಲು ಅಂಗನವಾಡಿಗಳು ಕೃಷಿ ಉತ್ಪನ್ನಗಳನ್ನು
ಖರೀದಿಸುವಾಗ ಸ್ಥಳೀಯ ರೈತ ಉತ್ಪಾದಕ ಸಂಸ್ಥೆಗಳ ಮೂಲಕವೇ ಖರೀದಿ ಮಾಡಬೇಕೆಂಬ ನಿಯಮ ಜಾರಿಗೆ ತನ್ನಿ ಇದರಿಂದ ಹೆಚ್ಚುವರಿ ಬೆಲೆಯಲ್ಲಿ ಖರೀದಿ ಮಾಡಿ ಸರ್ಕಾರಕ್ಕೆ ವಂಚನೆ ಮಾಡುವುದು ತಪ್ಪುತ್ತದೆ.ರೈತ ಉತ್ಪಾದಕ ಸಂಸ್ಥೆಗಳು ಬಲವರ್ಧನೆ ಆಗುತ್ತವೆ
2022 -23ರಲ್ಲಿ ಸಾಲಿನಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ 39 ದಿನಗಳು ಕಬ್ಬು ಬೆಳೆಗಾರ ರೈತರು ಸತತ ಹೋರಾಟ ಮಾಡಿದಾಗ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಬೆಳಗಾವಿ ವಿಧಾನಸಭೆಯಲ್ಲಿ ಕಬ್ಬುದರ ಏರಿಕೆ ಮಾಡುವಂತೆ ಆಗ್ರಹಿಸಿದಾಗ ರಾಜ್ಯ ಸರ್ಕಾರ ಕಬ್ಬಿನ ಎಫ್ ಆರ್ ಪಿ ಹೆಚ್ಚುವರಿ ದರ ಟನಗೆ 150 ರೂ ನಿಗದಿ ಮಾಡಿ ಆದೇಶ ಹೊರಡಿಸಿತ್ತು.ಸಕ್ಕರೆ ಕಾರ್ಖಾನೆಗಳು ಈ ಆದೇಶಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದನ್ನು ಉಚ್ಚ ನ್ಯಾಯಾಲಯದಲ್ಲಿ ಅಡ್ವಕೇಟ್ ಜನರಲ್ ಮೂಲಕ ಕೂಡಲೇ ತೆರವುಗೊಳಿಸಿ ರಾಜ್ಯಾದ್ಯಂತ ಕಬ್ಬು ಬೆಳೆಗಾರ ರೈತರಿಗೆ ಸುಮಾರು 950 ಕೋಟಿ ಹಣ ಕೊಡಿಸಬೇಕು.
ರೈತರು ಕೃಷಿ ಸಾಲ ತೆಗೆದುಕೊಳ್ಳುವಾಗ ರೈತನ ಸಿಬಿಲ್ ಸ್ಕೋರ್ ಪರಿಶೀಲಿಸಿ ಸಾಲ ಕೊಡಬೇಕು ಎನ್ನುವ ನಿಯಮ ಜಾರಿಗೆ ಬಂದಿರುವ ಕಾರಣ ಲಕ್ಷಾಂತರ ರೈತರು ಬ್ಯಾಂಕುಗಳಲ್ಲಿ ಸಾಲ ಸಿಗದೇ ಖಾಸಗಿ ಲೆವಾದೇವಿದಾರದಿಂದದ ದುಬಾರಿ ಬಡ್ಡಿ ನೀಡಿ ಸಾಲ ಪಡೆಯಬೇಕಾಗಿದೆ ರೈತರ ಮಕ್ಕಳಿಗೆ ವಿದ್ಯಾಭ್ಯಾಸ ಸಾಲವು ಸಿಗುತ್ತಿಲ್ಲ ಆದ್ದರಿಂದ ಸಿಬಿಲ್ ಸ್ಕೋರ್ ಮಾನದಂಡ ರದ್ದು ಮಾಡಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಹಿಂದಿನ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದರಿಂದ ರಹಧಾರಿ ಇಲ್ಲದ ಖಾಸಗಿ ಖರೀದಿದಾರರು ರೈತರ ಉತ್ಪನ್ನಗಳನ್ನು ಖರೀದಿಸಿ ಮೋಸಗೊಳಿಸುತ್ತಿದ್ದಾರೆ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ ಎಪಿಎಂಸಿ ಗಳು ಹಣಕಾಸಿನ ತೊಂದರೆಯಿಂದ ಸಂಕಷ್ಟಕ್ಕೆ ಸಿಲುಕಿವೆ ತಾವು ಹಲವಾರು ಬಾರಿ ನಾವು ಅಧಿಕಾರಕ್ಕೆ ಬಂದರೆ ತಿದ್ದುಪಡಿ ಕಾಯ್ದೆ ರದ್ದು ಮಾಡುತ್ತೇವೆ ಎಂದು ಬಹಿರ೦ಗವಾಗಿ ರಾಜ್ಯದ ರೈತರಿಗೆ ತಿಳಿಸಿದ್ದೀರಿ ಅದರಂತೆ ಕ್ರಮ ಕೈಗೊಳ್ಳಬೇಕು
ದೇವರಾಜ್ ಅರಸು ಅವರ ಕಾಲದಲ್ಲಿ ಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ಜಾರಿಗೆ ತಂದಿರುವುದರಿಂದ ಸಣ್ಣ ಸಣ್ಣ ರೈತರು ಕೃಷಿ ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಕೃಷಿ ಕ್ಷೇತ್ರ ದುರ್ಬಲಗೊಳ್ಳುತ್ತಿದೆ ಇದರ ವಿರುದ್ಧ ನಾವು ರಾಜ್ಯಾದ್ಯಂತ ಹೋರಾಟ ಮಾಡಿದಾಗ ತಾವು ನಮ್ಮ ಹೋರಾಟಕ್ಕೆ ಬೆಂಬಲ ನೀಡಿ ವಿಧಾನಸಭೆಯಲ್ಲಿ ವಿರೋಧ ಮಾಡಿದ್ದೀರಿ ಅದರಂತೆ ತಾವು ಕೂಡಲೇ ತಿದ್ದುಪಡಿ ಕಾಯ್ದೆ ರದ್ದು ಮಾಡಲು ಕ್ರಮ ಕೈಗೊಳ್ಳಬೇಕು
ರಾಜ್ಯಾದ್ಯಂತ ಕಾಡಂಚಿನ ಪ್ರದೇಶದಲ್ಲಿ ರೈತರು ಅರಣ್ಯ ಭೂಮಿ ಒತ್ತುವರಿ ಮಾಡಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕಾನೂನು ಪ್ರಕಾರ ಬಗರುಕುಂ ಸಾಗುವಳಿ ಪತ್ರ ಸಕ್ರಮಗೊಳಿಸಿ ಆದೇಶ ಹೊರಡಿಸಬೇಕು ಎಂದರು.
ರಾಜ್ಯದ ರೈತರ ಪರವಾಗಿ ನಾವು ಸಲ್ಲಿಸಿರುವ ಸಮಸ್ಯೆಗಳ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು
ನೂತನ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ರವರನ್ನು ಉಚ್ಚ ನ್ಯಾಯಲಯದಲ್ಲಿ ಭೇಟಿ ಮಾಡಿ ಕಬ್ಬುಗೆ 150 ರೂ ಹೆಚ್ಚುವರಿ ದರ ಆದೇಶ ತಡೆಯಾಜ್ಞೆ ಕೂಡಲೇ ತೆರವುಗೊಳಿಸುವಂತೆ ಕೊರಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಎಸ್. ಬಿ. ಸಿದ್ನಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಎತ್ತಿನ ಗುಡ್ಡ. ಧಾರವಾಡ ಜಿಲ್ಲಾ ರೇವಣಯ್ಯ ಹಿರೆಮಠ, ಬಾಗಲಕೋಟೆ ಜಿಲ್ಲೆ ಹತ್ತಳ್ಳಿದೇವರಾಜ್, ಮಲ್ಲಪ್ಪ ಮನಿಹಾಳ್. ಶಾಸಪನಾವಿ. ಎಲ್ಲಪ್ಪ ಕುಲಗೂಡ, ಚೆನ್ನಪ್ಪ ಜಗದಪ್ಪನವರ್ ಇದ್ದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ