CrimeKannada NewsKarnataka NewsLatest

*ತಂದೆ-ತಾಯಿಯನ್ನೇ ಹತ್ಯೆಗೈದ ಮಗ*

ಪ್ರಗತಿವಾಹಿನಿ ಸುದ್ದಿ: ಮಗನೇ ತಂದೆ ಹಾಗೂ ತಾಯಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬೈಕಾಡಿಯಲ್ಲಿ ನಡೆದಿದೆ.

ಗಾಂಧಿನಗರ ನಿವಾಸಿ ಮೆಹಬೂಬ್, ಸಂಶದ್ ಬೇಗಂ ಕೊಲೆಯಾದ ದುರ್ದೈವಿಗಳು. ಶಾಹಿದ್ ಅಲಿ (31) ಕೊಲೆಗೈದ ಆರೋಪಿ. ಸುತ್ತಿಗೆಯಿಂದ ಹೊಡೆದು ಕೊಲೆಗೈದಿರುವ ಶಂಕೆ ವ್ಯಕ್ಯವಾಗಿದೆ.

ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button