Latest

ರಾಮಾಯಣದ ‘ರಾವಣ’ ಖ್ಯಾತಿಯ ಅರವಿಂದ್ ತ್ರಿವೇದಿ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ; ಮುಂಬೈ: ರಾಮಾಯಣ ಧಾರವಾಹಿಯ ರಾವಣ ಪಾತ್ರಧಾರಿ ಅರವಿಂದ ತ್ರಿವೇದಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಭಾರತದ ಜನಪ್ರಿಯ ರಾಮಾಯಣ ಧಾರವಾಹಿಯಲ್ಲಿ ರಾವಣನಾಗಿ ಹೆಸರು ಮಾಡಿದ್ದ ಅರವಿಂದ ತ್ರಿವೇದಿ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.

Home add -Advt

ದೂರದರ್ಶನದಲ್ಲಿ ಪ್ರಸಾರ ಕಂಡಿದ್ದ ರಾಮಾಯಣ ಧಾರಾವಾಹಿ ಅಂದು ಎಲ್ಲರಿಗೂ ಅಚ್ಚುಮೆಚ್ಚಿನದಾಗಿತ್ತು. ಕೋವಿಡ್ ಮೊದಲ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ದೂರದರ್ಶನದಲ್ಲಿ ಈ ದಾರಾವಾಹಿಯನ್ನು ಮರು ಪ್ರಸಾರ ಮಾದಲಾಗಿತ್ತು. ರಾವಣಪಾತ್ರದಲ್ಲಿ ಅಮೋಘ ಅಭಿನಯ ಮಾಡಿದ್ದ ಅರವಿಂದ ತ್ರಿವೇದಿ ಸಾಕಷ್ಟು ಜನಪ್ರಿಯತೆ ಪಡೆದುಕೊಮ್ಡಿದ್ದರು. ಇದೀಗ ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆ ಮುಂಬೈನ ಕಾಂಡಿಯಲ್ಲಿ ನಡೆಯಲಿದೆ.

ಹೆತ್ತ ಮಕ್ಕಳಿಗೆ ವಿಷವುಣಿಸಿ ಸಾವಿಗೆ ಶರಣಾದ ತಾಯಿ; ಕಾರಣವೇನು ಗೊತ್ತೆ?

Related Articles

Back to top button