Uncategorized

ರಮೇಶ ಜಾರಕಿಹೊಳಿ ಹೈಕಮಾಂಡ್ ಬಳಿ ಕೇಳಿರುವ ಬೆಳಗಾವಿ ಜಿಲ್ಲೆಯ16 ಕ್ಷೇತ್ರಗಳು ಯಾವುವು ಗೊತ್ತೇ?

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬರುವ ವಿಧಾನಸಭೆ ಚುನಾವಣೆಗೆ  ಬೆಳಗಾವಿ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳುತ್ತೀರೋ ಅಥವಾ ಪೂರ್ಣ ರಾಜ್ಯದ ಉಸ್ತುವಾರಿ ವಹಿಸಿಕೊಳ್ಳುತ್ತೀರೋ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ, ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ, ಬೆಳಗಾವಿ ಜಿಲ್ಲೆಯ 16 ಕ್ಷೇತ್ರಗಳನ್ನು ಕೇಳಿದ್ದೇನೆ. ಗೋಕಾಕ ಮತ್ತು ಅರಬಾವಿ ನಾನು ಹೋಗುವುದಿಲ್ಲ. ಅದನ್ನು ಅಲ್ಲಿನವರೇ ನೋಡಿಕೊಳ್ಳುತ್ತಾರೆ ಎಂದು ಉತ್ತರಿಸಿದ್ದಾರೆ.

 

ಬೆಳಗಾವಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಹೈಕಮಾಂಡ್ ಮೀಟಿಂಗ್ ಇತ್ತು. ಅಲ್ಲಿ ಬೆಳಗಾವಿ ಜಿಲ್ಲೆಯ 16 ಮತ್ತು ರಾಯಚೂರಿನ ಕೆಲವು, ಮೈಸೂರಿನ ಕೆಲವು ಕ್ಷೇತ್ರಗಳನ್ನು ವಹಿಸಿಕೊಡುವಂತೆ ಕೇಳಿದ್ದೇನೆ ಎಂದು ತಿಳಿಸಿದರು. ಗೋಕಾಕ ಮತ್ತು ಅರಬಾವಿಗೆ ನಾನು ಹೋಗುವುದಿಲ್ಲ. ಅದನ್ನು ಅವರು ನೋಡಿಕೊಳ್ಳುತ್ತಾರೆ ಎಂದೂ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಗ್ಗೆ ಮುಂದಿನ ನಡೆ ಏನು ಎಂದು ಪ್ರಶ್ನಿಸಿದಾಗ, ನಾನು ಸ್ಟಾರ್ಟ್ ಮಾಡಿ ಬಿಟ್ಟಿದ್ದೇನೆ. ಇನ್ನು ಅವರು ಮಂದುವರಿಸುತ್ತಾರೆ ಎಂದೂ ಹೇಳಿದರು.

ಹಿಂದಿನ ರೋಷಾವೇಶ, ಅಬ್ಬರ ಇಂದಿನ ಅವರ ಪತ್ರಿಕಾಗೋಷ್ಠಿಯಲ್ಲಿರಲಿಲ್ಲ. ಬಹಳ ಸೌಮ್ಯವಾಗಿಯೇ ಮಾತನಾಡಿದರು. ಗ್ರಾಮೀಣ ಕ್ಷೇತ್ರ ಮತ್ತು ಗ್ರಾಮೀಣ ಶಾಸಕರ ಕುರಿತು ಕೇಳಲಾದ ಪ್ರಶ್ನೆಗಳಿಗೂ ಶಾಂತವಾಗಿಯೇ ಉತ್ತರಿಸಿದರು. ಎಂದಿನ ರಮೇಶ ಜಾರಕಿಹೊಳಿ ರೀತಿ ಇಂದು ಇರಲಿಲ್ಲ.

ರಾಜಹಂಸಗಡದ ಕುರಿತು ಸಹ ಹಿಂದಿನ ಪತ್ರಿಕಾಗೋಷ್ಠಿಯಂತೆ ಆಕ್ರೋಶದಿಂದ ಮಾತನಾಡಲಿಲ್ಲ. ಮುಖ್ಯಮಂತ್ರಿಗಳು ಮಾರ್ಚ್ 2ರಂದು ಛತ್ರಪತಿ ಶಿವಾಜಿ ಪುತ್ಥಳಿ ಉದ್ಘಾಟಿಸುವರು ಎಂದು ತಿಳಿಸಿದರು. ಆದರೆ ಕಾರ್ಯಕ್ರಮಕ್ಕೆ ಜನರನ್ನು ಸೇರಿಸುವ ಬಗ್ಗೆ ಕೇಳಿದರೆ ಸ್ಪಷ್ಟ ಉತ್ತರ ನೀಡಲಿಲ್ಲ. ಕೇವಲ ಅರ್ಧ ಗಂಟೆ ಕಾರ್ಯಕ್ರಮ ಇದಾಗಲಿದೆ ಎಂದು ತಿಳಿಸಿದರು. ಅನೇಕ ಪ್ರಶ್ನೆಗಳಿಗೆ ನನಗೆ ಗೊತ್ತಿಲ್ಲ, ಈಗ ಅವೆಲ್ಲ ಬೇಡ ಎಂದೇ ಉತ್ತರಿಸಿದರು.

ಏಕಾ ಏಕಿ ರಮೇಶ ಜಾರಕಿಹೊಳಿ ಇಷ್ಟೊಂದು ಸೌಮ್ಯವಾಗಲು ಕಾರಣವೇನು ಎನ್ನುವ ಸಂಶಯ ಮೂಡುವಂತಾಯಿತು.

ರಮೇಶ ಜಾರಕಿಹೊಳಿ ಸುತ್ತ ಆಕಾಂಕ್ಷಿಗಳ ದಂಡು; ಮಾಜಿ ಸಚಿವರ ಕೈಗೇ ಈ ಬಾರಿ ಬಿಜೆಪಿ ಬಿ ಫಾರ್ಮ್?

https://pragati.taskdun.com/crowd-of-aspirants-around-ramesh-jarakiholi-bjp-b-form-in-the-hands-of-former-minister/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button