Latest

ಹುಬ್ಬಳ್ಳಿ; ಸ್ಪಾರ್ಕ್ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತ ಕೇಸ್; ಮ್ಯಾನೇಜರ್ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ; ತಾರಿಹಾಳ ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಮ್ಯಾನೇಜರ್ ರನ್ನು ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ ತಾರಿಹಾಳದಲ್ಲಿ ಬರ್ತಡೆ ಕೇಕ್ ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಕಾರ್ಖಾನೆ ಘಟಕದಲ್ಲಿ ನಿನ್ನೆ ಬೆಂಕಿ ಅವಘಡ ಸಂಭವಿಸಿ, 8 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳಲ್ಲಿ ಮೂವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಪ್ರಕರಣ ಸಂಬಂಧ ಇದೀಗ ಕಾರ್ಖಾನೆ ಮ್ಯಾನೇಜರ್ ಮಂಜುನಾಥ್ ಅವರನ್ನು ಹುಬ್ಬಳ್ಳಿ ಪೊಲಿಸರು ಬಂಧಿಸಿದ್ದಾರೆ.

Home add -Advt

ಕಾರ್ಖಾನೆ ಮಾಲೀಕ ಅಬ್ದುಲ್ ಖಾದಿರ್ ಶೇಖ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬೆಂಕಿ ಅವಘಡದಲ್ಲಿ ಮೃತಪಟ್ಟಿದ್ದ ಮಹಿಳೆ ವಿಜಯಲಕ್ಷ್ಮಿ ಪತಿ ವೀರಭದ್ರ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಾಗಿದ್ದು, ಮ್ಯಾನೇಜರ್ ಅವರನ್ನು ಬಂಧಿಸಲಾಗಿದೆ.
ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ; ಮೂವರ ಸಾವು

https://pragati.taskdun.com/latest/electrick-bikefiremandya/

Related Articles

Back to top button