ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಿಡಿ ಲೇಡಿ ಇದೀಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ ಹೇಳಿಕೆ ನೀಡಿರುವುದು ತನಿಖಾ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.
ಸಿಡಿ ಯುವತಿ ವಿಡಿಯೋದಲ್ಲಿ ಹೇಳುತ್ತಿರುವುದು ಸುಳ್ಳು. ಯಾವುದೇ ವಿಡಿಯೋ ನಮಗೆ ಬಂದಿಲ್ಲ. ಮಾಧ್ಯಮದಲ್ಲಿ ವಿಡಿಯೋ ಬಿಡುಗಡೆಯಾದ ಬಳಿಕವೇ ನಮಗೆ ವಿಷಯ ಗೊತ್ತಾಗಿದೆ ಎಂದು ಖಾಸಗಿ ವಾಹಿನಿಗೆ ಎಸ್ ಐಟಿ ಮುಖ್ಯಸ್ಥ ಸೌಮೆಂದು ಮುಖರ್ಜಿ ಹೇಳಿದ್ದಾರೆ.
ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ 5 ಬಾರಿ ನೋಟೀಸ್ ನೀಡಿದ್ದೇವೆ. ರಕ್ಷಣೆ ನೀಡುವುದಾಗಿಯೂ ಹೇಳಿದ್ದೇವೆ. ಆದರೂ ಆಕೆ ವಿಚಾರಣೆಗೆ ಹಾಜರಾಗಲು ಮುಂದಾಗಿಲ್ಲ. ಆಕೆ ಇರುವ ಜಾಗಕ್ಕೇ ತೆರಳಿ ನಾವು ಹೇಳಿಕೆ ದಾಖಲಿಸಿಕೊಳ್ಳುತ್ತೇವೆ ಎಂದಿದ್ದೇವೆ. ಆದರೂ ಆಕೆ ತಾನಿರುವ ಸ್ಥಳದ ಬಗ್ಗೆ ಕೂಡ ಮಾಹಿತಿ ನೀಡುತ್ತಿಲ್ಲ. ಯುವತಿಗೆ ರಕ್ಷಣೆ ನೀಡಲು ಸಿದ್ಧ ಆಕೆ ವಿಚಾರಣೆಗೆ ಹಾಜರಾಗಲಿ ಎಂದು ತಿಳಿಸಿದ್ದಾರೆ.
ಮತ್ತೊಂದು ವಿಡೀಯೋ ಕಳಿಸಿದ ಸಿಡಿ ಲೇಡಿ
ರಮೇಶ ಜಾರಕಿಹೊಳಿ ಸಿಡಿ ಪ್ರಕರಣ: ಮೂಲ ವಿಡೀಯೋ ಪತ್ತೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ