Belagavi NewsBelgaum NewsElection NewsKannada NewsKarnataka NewsPolitics

*52 ಪಿಕೆಪಿಎಸ್ ನಿರ್ದೇಶಕರನ್ನು ಡಿಸಿಸಿ ಬ್ಯಾಂಕ್‌ಗೆ ಕರೆತಂದ ರಮೇಶ್ ಕತ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಕ್ಕೇರಿ ತಾಲೂಕಿನ ಪಿಕೆಪಿಎಸ್ ನ 52 ನಿರ್ದೇಶಕರನ್ನು ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ಕರೆತಂದು ರಮೇಶ ಕತ್ತಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ನಿನ್ನೆಯಷ್ಟೇ ಹುಕ್ಕೇರಿಯ 40 ಪಿಕೆಪಿಎಸ್ ನಿರ್ದೇಶಕರ ಜೊತೆಗೆ ಬಾಲಚಂದ್ರ ಜಾರಕಿಹೊಳಿ ಸಭೆ ಮಾಡಿದರು.‌ ಡಿಸಿಸಿ ಬ್ಯಾಂಕ್ ಚುಕ್ಕಾಣಿ ನಾವೇ ಹಿಡಿತಿವಿ ಎಂದು ಸಭೆಯಲ್ಲಿ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.‌ 

ಈ ಸಭೆ ಹಿನ್ನೆಲೆಯಲ್ಲಿ ಫುಲ್ ಅಲರ್ಟ್ ಆದ ಮಾಜಿ ಸಂಸದ‌ ರಮೇಶ ಕತ್ತಿ, ಇಂದು ಎಲ್ಲ ಮತದಾರರನ್ನು ಕರೆತಂದು  ಮತ್ತೊಮ್ಮೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.‌

9 ನೇ ಬಾರಿಗೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಹುದ್ದೆಗೆ ರಮೇಶ್ ಕತ್ತಿ ನಾಮಪತ್ರ ಸಲ್ಲಿದ್ದು, ರಮೇಶ್ ಕತ್ತಿ ಪರ ಪಿಕೆಪಿಎಸ್ ನಿರ್ದೇಶಕರು ಘೋಷಣೆ ಕೂಗಿದ್ದಾರೆ.‌

Home add -Advt

ಈ ಮೂಲಕ ಡಿಸಿಸಿ ಬ್ಯಾಂಕ್ ಬ್ಯಾಟಲ್‌ನಲ್ಲೂ ಜಾರಕಿಹೊಳಿ ವರ್ಸಸ್ ಕತ್ತಿ ಮಧ್ಯೆ ಫೈಟ್ ತಾರಕಕ್ಕೆರಿದೆ.‌ ಜಾರಕಿಹೊಳಿ ಬ್ರದರ್ಸ್ ತಂತ್ರಕ್ಕೆ ರಮೇಶ್ ಕತ್ತಿ ಕೌಂಟರ್ ಕೊಟ್ಟಿದ್ದಾರೆ.‌

Related Articles

Back to top button