Latest

ಪ್ರಗತಿವಾಹಿನಿ ಸುದ್ದಿ ಓದಿ ಅಂಧ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ಸಹಾಯ

ಪ್ರಗತಿವಾಹಿನಿ ಸುದ್ದಿ; ರಾಣೆಬೆನ್ನೂರು: TV 9 ಸುದ್ದಿವಾಹಿನಿಯ ಸುದ್ದಿ ವಿಭಾಗದ ಮುಖ್ಯಸ್ಥ ರಂಗನಾಥ್ ಭರದ್ವಾಜ್ ಅಂಧರ ಜೀವ ಬೆಳಕು ಸಂಸ್ಥೆ ರಾಣೇಬೆನ್ನೂರಿನ ಅಂಧ ವಿದ್ಯಾರ್ಥಿನಿ ಗೌರಮ್ಮ ಬಾರಕೇರ ಅವರ ವಿದ್ಯಾಭ್ಯಾಸಕ್ಕೆ ಹಣಕಾಸಿನ ಸಹಾಯ ಮಾಡಿದ್ದು, ವಿದ್ಯಾರ್ಥಿನಿ ಕೃತಜ್ಞತೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿನಿ ಗೌರಮ್ಮ, ಇಲ್ಲಿನ ಸರಕಾರಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಇತ್ತೀಚಿಗೆ ಜರುಗಿದ ಪದವಿ ಪರೀಕ್ಷೆಯಲ್ಲಿ ಶೇ.80 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾಳೆ.

Related Articles

ಮೂಲತಃ ಬೀಳಗಿ ತಾಲೂಕು ಯರಕಲ್ ನವಳಾದ ಈ ವಿದ್ಯಾರ್ಥಿನಿ ಈಚೆಗೆ ತನ್ನ ತಾಯಿಯನ್ನೂ ಕಳೆದುಕೊಂಡಿದ್ದಾಳೆ. ಓದಿನಲ್ಲಿ ತುಂಬಾ ಆಸಕ್ತಿ ಹೊಂದಿರುವ ಈಕೆ ಆರ್ಥಿಕವಾಗಿ ಕಷ್ಟದಲ್ಲಿದ್ದಾಳೆ. ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ (ಎಂಎ) ಸಮಾಜಶಾಸ್ತ್ರ ವಿಭಾಗಕ್ಕೆ ಪ್ರವೇಶ ಪಡೆದುಕೊಂಡಿದ್ದಾಳೆ.

ಧಾರವಾಡದ ಅಕ್ಕಮಹಾದೇವಿ ವಸತಿ ನಿಲಯಕ್ಕೆ ಪ್ರವೇಶಾತಿ ಪಡೆಯಲು ಸಹಾಯ ಮಾಡಿ ಎಂದು ವಿದ್ಯಾರ್ಥಿನಿ ವಿನಂತಿಸಿಕೊಂಡಿದ್ದರು. ಈ ವಿದ್ಯಾರ್ಥಿನಿಯ ಕಷ್ಟವನ್ನು ಕಂಡು ಪ್ರಗತಿವಾಹಿನಿ  ಸುದ್ದಿ ಮಾಡಿತ್ತು. ಸುದ್ದಿ ಓದಿದ ಟಿವಿ 9 ಸುದ್ದಿ ವಿಭಾಗದ ಮುಖ್ಯಸ್ಥ ರಂಗನಾಥ್ ಭಾರದ್ವಾಜ್, ನಾಗನಗೌಡ ಬೆಳ್ಳುಳ್ಳಿ ಅವರಿಗೆ ಸ್ವತಃ ತಾವೇ ದೂರವಾಣಿ ಮೂಲಕ ಕರೆ ಮಾಡಿ, ಪ್ರಗತಿವಾಹಿನಿಯಲ್ಲಿ ಪ್ರಕಟವಾಗಿರುವ ಸುದ್ದಿ ಗಮನಿಸಿದೆ. ನಾನೂ ಸ್ವಲ್ಪ ನೆರವು ನೀಡಲು ಬಯಸಿದ್ದೇನೆ ಎಂದು ತಿಳಿಸಿದರು. ವಿದ್ಯಾರ್ಥಿನಿಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ವಿದ್ಯಾರ್ಥಿನಿಯ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ಹಣಕಾಸಿನ ನೆರವನ್ನು ನೀಡಿ ಶುಭಾಶಯಗಳನ್ನು ಕೋರಿದರು.

Home add -Advt

ಈ ಕುರಿತು ಸಂತಸ ಹಂಚಿಕೊಂಡಿರುವ ಗೌರಮ್ಮ ಬಾರಕೇರ, ರಂಗನಾಥ ಭಾರಧ್ವಾಜ್  ಅವರ ಈ ಸಹಾಯ ನಾನು ಎಂದು ಮರೆಯುವುದಿಲ್ಲ, ನಾನು ಉತ್ತಮವಾಗಿ ಓದಿ ರಂಗನಾಥ ಭಾರದ್ವಾಜ್   ಹಾಗೂ ನನಗೆ ಸಹಾಯ ಸಹಕಾರ ನೀಡಿದ ಪ್ರಗತಿವಾಹಿನಿ ಸೇರಿದಂತೆ ಪ್ರತಿಯೊಬ್ಬರಿಗೂ ಹೆಸರನ್ನು ತರುವುದರ ಮುಖಾಂತರ ಎಲ್ಲರಿಗೂ ಚಿರಋಣಿಯಾಗಿರುತ್ತೇನೆ ಎಂದು ತಿಳಿಸಿದ್ದಾರೆ.

ಈ ಅಂಧ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಸಣ್ಣ ಸಹಾಯ ಮಾಡಿ

ಅಂಧರ ಜೀವ ಬೆಳಕು ಟ್ರಸ್ಟ್ ಗೆ ಧರ್ಮಸ್ಥಳ ಟ್ರಸ್ಟ್ ನಿಂದ 50 ಸಾವಿರ ರೂ. ನೆರವು

ರಾಜ್ಯದ 11 ಪೊಲೀಸರಿಗೆ ಕೇಂದ್ರ ಗೃಹಮಂತ್ರಿ ಪದಕ ಘೋಷಣೆ

Related Articles

Back to top button