
ಪ್ರಗತಿವಾಹಿನಿ ಸುದ್ದಿ: ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಬಂಧನಕ್ಕೀಡಾಗಿರುವ ನಟಿ ರನ್ಯಾ ರಾವ್ ನಿರ್ದೇಶನದ ಕಂಪನಿಗೆ ಕೆಐಎಡಿಬಿಯಿಂದ ಭೂಮಿ ಮಂಜೂರಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಸಿಇಓ ಡಾ.ಮಹೇಶ್ ಸ್ಪಷ್ಟನೆ ನೀಡಿದ್ದು, ಯಾವುದೇ ಜಾಗ ಮಂಜೂರು ಆಗಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕ್ಕೆಐಎಡಿಬಿ ಸಿಇಓ ಡಾ.ಮಹೇಶ್, ರನ್ಯಾ ರಾವ್ ಕಂಪನಿಗೆ ಸರ್ಕಾರದಿಂದ ಯಾವುದೇ ಜಾಗ ಮಂಜೂರಾಗಿಲ್ಲ. ಶಿರಾ ಬಳಿಯ ಭೂಮಿ ಕೆಐಎಡಿಬಿ ವಶದಲ್ಲಿಯೇ ಇದೆ ಎಂದು ತಿಳಿಸಿದ್ದಾರೆ.
2023ರ ಜನವರಿಯಲ್ಲಿ ಸ್ಟೇಟ್ ಲೆವಲ್ ವಿಂಡೋ ಕಮಿಟಿ ಜನರಲ್ ಕೆಟೆಗರಿಯಲ್ಲಿ ಕ್ಲಿಯರೆನ್ಸ್ ಕೊಟ್ಟಿತ್ತು. ಕಮಿಟಿ ಕ್ಲಿಯರೆನ್ಸ್ ಬಳಿಕ ಕಂಪನಿ ಕಡೆಯಿಂದ ಜಾಗ ಮಂಜೂರು ಮಾಡುವಂತೆ ಯಾವುದೆ ಮನವಿ ಬಂದಿಲ್ಲ. ಹಾಗಾಗಿ ಕೆಐಎಡಿಬಿಯಿಂದ ಯಾವುದೇ ಜಾಗ ಮಂಜೂರಾಗಿಲ್ಲ. ಕಮಿಟಿ ಕ್ಲಿಯರೆನ್ಸ್ ಸಿಕ್ಕ ಬಳಿಕ ಜಾಗ ಪಡೆಯಲು ಎರಡು ವರ್ಷ ಸಮಯವಿರುತ್ತದೆ. ಈಗಾಗಲೇ 2 ವರ್ಷ ಮುಗಿದಿದೆ. ಈಗ ಕಂಪನಿಗೆ ಜಮೀನು ಮಂಜೂರು ಮಾಡಲು ಆಗಲ್ಲ. ಹಾಗಾಗಿ ಜಮೀನು ಕೆಐಎಡಿಬಿ ವಶದಲ್ಲಿಯೇ ಇದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ