
ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದಲ್ಲಿ 5 ಅಡಿ ಉದ್ದದ ಕೇರೆ ಹಾವು ನುಗ್ಗಿದ್ದು ಅದನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.
ಇದನ್ನು ಕಂಡ ನೌಕರರು ಕೂಡಲೆ ವನ್ಯಜೀವಿ ವಿಭಾಗಕ್ಕೆ ಮಾಹಿತಿ ನೀಡಿದರು. ತಕ್ಷಣ ಅಗತ್ಯದ ಸಲಕರಣೆಗಳೊಂದಿಗೆ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಇಬ್ಬರು ಸಿಬ್ಬಂದಿ ಹಾವನ್ನು ಸುರಕ್ಷಿತವಾಗಿ ಹಿಡಿದು ಬೇರೆಡೆ ಸಾಗಿಸಿದರು.
“ತುರ್ತು ಪರಿಸ್ಥಿತಿಯ ಬಗ್ಗೆ ವನ್ಯಜೀವಿ SOS ನ್ನು ಎಚ್ಚರಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವರ ನಿವಾಸದಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿಗೆ ನಾವು ಕೃತಜ್ಞರಾಗಿರುತ್ತೇವೆ” ಎಂದು ವನ್ಯಜೀವಿ SOS ಹೇಳಿದೆ.
ಕುಸಿದುಬಿದ್ದ ದೂಧ ಸಾಗರ ಕೇಬಲ್ ಸೇತುವೆ; 40 ಜನರ ರಕ್ಷಣೆ