ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿಯಾದೀತು ಜೋಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮ್ಯಾಜಿಕ್ ಬ್ರಿಕ್ಸ್ ಆಫ್/ ನೋ ಬ್ರೋಕರ್ ಆಪ್/ಓ.ಎಲ್.ಎಕ್ಸ/ ವೆಬ್‌ಸೈಟ್ಗಳಲ್ಲಿ ಮನೆ ಮಾರಾಟಕ್ಕೆ ಇದೆ ಎಂದು ಜಾಹೀರಾತು ಹಾಕಿದಾಗ ಸೈಬರ್ ವಂಚಕರು ಮಿಲ್ಟ್ರಿ ಅಧಿಕಾರಿಗಳು ಎಂದು ಹೇಳಿಕೊಂಡು ಕರೆ ಮಾಡಿ ನಾವು ಬೆಳಗಾವಿ ನಗರಕ್ಕೆ ವರ್ಗಾವಣೆ ಆಗಿ ಬರುತ್ತಿದ್ದೇವೆ, ಅದಕ್ಕೆ ಮನೆ ಖರೀದಿಸುವುದು ಇದೆ ಎಂದು ಹೇಳಿ ಕರೆ ಮಾಡಿ ನಿಮ್ಮೊಂದಿಗೆ ಮನೆಯ ಖರೀದಿ ಬಗ್ಗೆ ವ್ಯವಹರಿಸಿ, ನಿಮ್ಮ ಖಾತೆಗೆ ಟೋಕನ್ ಅಡ್ವಾನ್ಸ್ ಹಣ ಹಾಕುತ್ತೇವೆ ಎಂದು ಹೇಳಿ ನಿಮ್ಮ ಖಾತೆಗೆ 10/- ರೂಪಾಯಿಯನ್ನು ವರ್ಗಾಯಿಸಿ, ವಿಶ್ವಾಸ ಪಡೆದುಕೊಂಡು ನಂತರ ನಿಮಗೆ “ಕ್ಯೂಆರ್ ಕೋಡ್” (QR CODE) ಇಲ್ಲವೇ “ಲಿಂಕ್” ಕಳುಹಿಸಿ ನಿಮ್ಮ ಖಾತೆಯಲ್ಲಿರುವ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡುವ ಜಾಲ ಸಕ್ರಿಯವಾಗಿದೆ.
ಕಾರಣ, ಸಾರ್ವಜನಿಕರು ಮ್ಯಾಜಿಕ್ ಬ್ರಿಕ್ಸ್ ಆಫ್ ಬ್ರೋಕರ್ ಆಪ್/ಓ.ಎಲ್.ಎಕ್ಸ, ಇಲ್ಲಿ ಜಾಹಿರಾತು ಹಾಕಿದಾಗ ಖುದ್ದಾಗಿ ವ್ಯವಹರಿಸಿ ಮನೆಯ ಖjರೀದಿಯ ಹಣವನ್ನು ಖುದ್ದಾಗಿ ಪಾವತಿಸಬೇಕೆಂದು ಖರೀದಿಸುವವರಿಗೆ ತಿಳಿಸಿ ವ್ಯವಹರಿಸಿಕೊಳ್ಳಲು ಕೋರಲಾಗಿದೆ.
ಹಾಗೂ ಮ್ಯಾಜಿಕ್ ಬ್ರಿಕ್ಸ್ ಆಫ್/ ನೋ ಬ್ರೋಕರ್ ಆಪ್/ಓ.ಎಲ್.ಎಕ್ಸ್ ಗಳಲ್ಲಿ ಆನ್‌ಲೈನ್ ಮುಖಾಂತರ ಹಣ ವರ್ಗಾವಣೆ ಮಾಡುತ್ತೇವೆ ಎಂದು ಹೇಳಿ ಮೋಸದಿಂದ ಸಾರ್ವಜನಿಕರ ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡುತ್ತಿದ್ದು ಈ ಬಗ್ಗೆ ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರೆದಿದೆ. ಆದ್ದರಿಂದ ಮನೆ ಮಾರುವವರು ಹಾಗೂ ಮನೆ ಬಾಡಿಗೆಗೆ ಕೊಡುವವರು ಎಚ್ಚರ ವಹಿಸಬೇಕೆಂದು ಡಿಸಿಪಿ ವಿಕ್ರಂ ಅಮಟೆ ಕೋರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ