Latest

ವಿಚ್ಛೇದನ ಪಡೆದು ಐದು ವರ್ಷದ ಬಳಿಕ ಮರು ಮದುವೆಯಾದ ದಂಪತಿ

ಪ್ರಗತಿವಾಹಿನಿ ಸುದ್ದಿ; ಮೈಸೂರು: ವಿಚ್ಛೇದನ ಪಡೆದಿದ್ದ ದಂಪತಿ 5 ವರ್ಷದ ಬಳಿಕ ಮರು ವಿವಾಹವಾಗಿರುವ ವಿಚಿತ್ರ ಘಟನೆ ಮೈಸೂರಿನಲ್ಲಿ ನಡೆದಿದೆ.

ವಿವಾಹವಾಗಿ 25 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಜೋಡಿ, ಕಳೆದ 5 ವರ್ಷಗಳ ಹಿಂದೆ ಮನಸ್ತಾಪದ ಹಿನ್ನೆಲೆಯಲ್ಲಿ ವಿಚ್ಛೇದನ ಪಡೆದಿದ್ದರು. ದಂಪತಿಗೆ ಒಂದು ಗಂಡು ಇಬ್ಬರು ಹೆಣ್ಣು ಮಕ್ಕಳು ಕೂಡ ಇದ್ದರು. ಜೀವನಾಂಶಕ್ಕಾಗಿ ಕೋರ್ಟ್ ಮೇಟ್ಟಿಲೇರಿದ್ದರು.

ಜಿಲ್ಲಾ ಸತ್ರ ನ್ಯಾಯಾಲಯಲ ಮೆಗಾ ಲೋಕ ಅದಾಲತ್ ನಡೆಸಿ ರಾಜಿ ಸಂಧಾನದ ಮೂಲಕ ದಂಪತಿಗಳ ಮನವೊಲಿಸಿ ಮರು ಮದುವೆ ಮಾಡಿಸಿದೆ. ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎಲ್.ರಘುನಾಥ ನೇತೃತ್ವದಲ್ಲಿ ಮರು ಮದುವೆ ಮಾಡಿಸಲಾಗಿದೆ. ಈ ಮೂಲಕ ವಿಚ್ಛೇದನ ರದ್ದುಗೊಂಡಿದೆ.

ಮೆಗಾ ಲೋಕ ಅದಾಲತ್ ನಲ್ಲಿ ಸತ್ರ ನ್ಯಾಯಾಲಯ ಒಂದೇ ದಿನ 19 ವಿಚ್ಛೇದನ ಪ್ರಕರಣಗಳನ್ನು ರಾಜಿ ಮೂಲಕ ಸಂಧಾನಗೊಳಿಸಿದೆ.
ಮಹಿಳಾ ಮೋರ್ಚಾ ಅಡಿಯಲ್ಲಿ ಆಜಾದಿ ಆಂದೋಲನ ಸಭೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button