*ಇದು ಪರಿವರ್ತನೆಯ ಸಮಯ; ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮಗೆ ಸುವರ್ಣಾವಕಾಶ ನೀಡಲಾಗಿದೆ; ರಾಷ್ಟ್ರಪತಿ ದ್ರೌಪದಿ ಮುರ್ಮು*
75ನೇ ಗಣರಾಜ್ಯೋತ್ಸವ
ಪ್ರಗತಿವಾಹಿನಿ ಸುದ್ದಿ: 75ನೇ ಗಣರಾಜ್ಯೋತ್ಸವದ ಮುನ್ನಾ ದಿನವಾದ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶವನ್ನುದ್ದೇಶಿಸಿ ಮಾತನಾಡಿದ್ದು, ಭಾರತ ಅಮೃತ ಕಾಲದ ಆರಂಭಿಕ ವರ್ಷದಲ್ಲಿದೆ ಎಂದಿದ್ದಾರೆ.
ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮಗೆ ಸುವರ್ಣಾವಕಾಶ ನೀಡಲಾಗಿದೆ. ಇದು ಪರಿವರ್ತನೆಯ ಸಮಯ. ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬರ ಕೊಡುಗೆ ಹಾಗೂ ನಮ್ಮ ಗುರಿಗಳನ್ನು ಸಾಧಿಸಲು ನಾಗರಿಕರು ನಿರ್ಣಾಯಕರಾಗುತ್ತಾರೆ ಎಂದು ಹೇಳಿದರು.
ನಾಳೆ 75ನೇ ಗಣರಾಜ್ಯೋತ್ಸವ. ಸಂವಿಧಾನದ ಪ್ರಾರಂಭವನ್ನು ಆಚರಿಸುವ ದಿನ. ಅದರ ಪೀಠಿಕೆಯು ನಾವು ಭಾರತದ ಜನರು ಎಂಬ ಪದಗಳೊಂದಿಗೆ ಆರಂಭವಾಗುತ್ತದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಪಾಶ್ಚಿಮಾತ್ಯ ಪ್ರಜಾಪ್ರಭುತ್ವ ಪರಿಕಲ್ಪನೆಗಿಂತ ಹಳೆಯದು. ಅದಕ್ಕಾಗಿಯೇ ‘ಭಾರತವನ್ನು ಪ್ರಜಾಪ್ರಭುತ್ವದ ತಾಯಿ’ ಎಂದು ಕರೆಯುತ್ತಾರೆ ಎಂದು ಹೇಳಿದರು.
ಈ ವಾರ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರದಲ್ಲಿ ಭಗವಾನ್ ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆದಿದೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ನಾವೂ ವೀಕ್ಷಿಸಿದ್ದೇವೆ. ಈ ಕಾರ್ಯಕ್ರಮವನ್ನು ವಿಶಾಲ ದೃಷ್ಟಿಕೋನದಿಂದ ನೋಡಲಾಗುತ್ತದೆ. ಭವಿಷ್ಯದ ಇತಿಹಾಸಕಾರರು ಭಾರತದ ನಾಗರಿಕತೆಯ ಪರಂಪರೆಯ ನಿರಂತರ ಮರು-ಶೋಧನೆಯಲ್ಲಿ ಇದನ್ನು ಹೆಗ್ಗುರುತಾಗಿ ಪರಿಗಣಿಸುತ್ತಾರೆ. ನ್ಯಾಯಾಂಗ ಪ್ರಕ್ರಿಯೆ ಮತ್ತು ಅತ್ಯುನ್ನತ ನ್ಯಾಯಾಲಯದ ತೀರ್ಪಿನ ಬಳಿಕ ದೇವಾಲಯ ನಿರ್ಮಾಣ ಆರಂಭವಾಯಿತು. ಇದು ಒಂದು ಭವ್ಯವಾದ ಕಟ್ಟಡವಾಗಿದೆ. ಜನರ ನಂಬಿಕೆಗೆ ಅಭಿವ್ಯಕ್ತಿಯನ್ನು ನೀಡುತ್ತದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ