Belagavi NewsBelgaum NewsKannada NewsKarnataka NewsNational

*ಅ.1 ರಿಂದ ಬೆಳಗಾವಿ-ದೆಹಲಿ ನಡುವೆ ಇಂಡಿಗೋ ವಿಮಾನ ಸೇವೆ ಪುನರಾರಂಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬರುವ 1ನೇ ಅಕ್ಟೋಬರ್ ರಿಂದ ನವ-ದೆಹಲಿ – ಬೆಳಗಾವಿ – ನವ-ದೆಹಲಿ ನಡುವೆ ಇಂಡಿಗೋ ವಿಮಾನ ಸಂಸ್ಥೆ ತನ್ನ ದಿನನಿತ್ಯದ ಸಂಚಾರ ಪುನರಾರಂಭಿಸಲಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ತಿಳಿಸಿದ್ದಾರೆ.

ಈ ಮೊದಲು ಇಂಡಿಗೋ ವಿಮಾನಯಾನ ಸಂಸ್ಥೆಯು ಪ್ರಸ್ತಾಪಿತ ಮಾರ್ಗದಲ್ಲಿ ದಿನನಿತ್ಯದ ಸೇವೆ ಒದಗಿಸುತ್ತಿದ್ದು, ಕೆಲವು ತಿಂಗಳುಗಳ ಹಿಂದಷ್ಟೆ ಈ ಸೇವೆಯನ್ನು ಸಪ್ತಾಹದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ ಮತ್ತು ಶುಕ್ರವಾರಗಳಂದು ಮಾತ್ರ ಸಿಮೀತಗೊಳಿಸಿತ್ತು, ಈ ಕುರಿತು ಇಲ್ಲಿನ ಉದ್ಯಮದಾರರಿಗೆ, ವ್ಯಾಪಾರಸ್ಥರಿಗೆ, ಡಾಕ್ಟರಗಳಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಆಗುತ್ತಿರುವ ತೊಂದರೆಯನ್ನು ತಿಳಿಸಿ, ಕೂಡಲೆ ಈ ಮೊದಲಿನಂತೆ ಎಲ್ಲ ದಿನಗಳಲ್ಲಿ ವಿಮಾನ ಸೇವೆಯನ್ನು ಒದಗಿಸಲು ಕ್ರಮ ಜರುಗಿಸಲು ಕೋರಿ ಕೇಂದ್ರ ವಿಮಾನಯಾನ ಸಚಿವರಾದ ಕೆ. ರಾಮಮೋಹನ ನಾಯ್ಡು ಇವರನ್ನು ಖುದ್ದಾಗಿ ಭೇಟಿ ಮಾಡಿದರು.

ಮನವಿಗೆ ಮನ್ನಣೆ ನೀಡಿ ಇಂಡಿಗೋ ವಿಮಾನ ಸಂಸ್ಥೆಯು ಅಕ್ಟೋಬರ ರಿಂದ ನವ-ದೆಹಲಿ-ಬೆಳಗಾವಿ-ನವ-ದೆಹಲಿ ನಡುವೆ ಪ್ರತಿ ದಿನ ದೆಹಲಿಯಿಂದ ಬೆಳ್ಳಿಗ್ಗೆ : 06.15 ಕ್ಕೆ ಹೊರಟು ಬೆಳಗಾವಿಯನ್ನು ಬೆಳ್ಳಗ್ಗೆ :08.40 ಕ್ಕೆ ತಲುಪಿ, ತದನಂತರ ಅದೆ ದಿನ ಬೆಳ್ಳಿಗ್ಗೆ : 09.10 ಕ್ಕೆ ಬೆಳಗಾವಿಯಿಂದ ಹೊರಟು ದೆಹಲಿಯನ್ನು 11.40 ಕ್ಕೆ ತಲುಪಲಿದೆ.

ಅದರಂತೆ ಇಂಡಿಗೋ ಸಂಸ್ಥೆ ಬೆಂಗಳೂರು-ಬೆಳಗಾವಿ ನಡುವೆ ವಿಮಾನಯಾನ ಸೇವೆಯನ್ನು ಕೇವಲ ಸೋಮವಾರ, ಬುಧವಾರ, ಶುಕ್ರವಾರ ಮತ್ತು ರವಿವಾರ ಬೆಳ್ಳಿಗ್ಗೆ ಹಾಗೂ ಮಂಗಳವಾರ, ಗುರುವಾರ ಹಾಗೂ ಶನಿವಾರ ದಂದು ಸಾಯಂಕಾಲ ಮಾತ್ರ ಸೇವೆಯನ್ನು ಒದಗಿಸುತ್ತಿದ್ದು, ಇದನ್ನು ಸಹ ಈ ಮೊದಲಿನಂತೆ ದಿನನಿತ್ಯದ ಸೇವೆ ಒದಗಿಸಸುವ ಬಗ್ಗೆಯೂ ಸಹ ಇಂಡಿಗೋ ಸಂಸ್ಥೆ ಅಧಿಕಾರಿಗಳು ಸಂಸದರಿಗೆ ಭರವಸೆಯನ್ನು ನೀಡಿರುವ ಬಗ್ಗೆ ಸಂಸದರ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button