Latest

ಚುನಾವಣೆಗೆ ಸ್ಪರ್ಧಿಸುವುದು ಮೂಲಭೂತ ಅಥವಾ ಸಾಮಾನ್ಯ ಕಾನೂನಿನ ಹಕ್ಕಲ್ಲ: ಸುಪ್ರೀಂ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು ಮೂಲಭೂತ ಹಕ್ಕು ಅಥವಾ ಸಾಮಾನ್ಯ ಕಾನೂನಿನ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ಪರಿಗಣಿಸಿದೆ.  ತಮ್ಮ ಹೆಸರು ಅನುಮೋದನೆ ಮಾಡಲು ಅನುಮೋದಕರಿಲ್ಲದೆ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಯತ್ನಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ವೆಚ್ಚ ಪಾವತಿಗೆ ಆದೇಶಿಸಿದೆ.

ಚುನಾವಣೆಯಲ್ಲಿ ಸ್ಪರ್ಧಿಸುವುದು ಮೂಲಭೂತ ಅಥವಾ ಸಾಮಾನ್ಯ ಹಕ್ಕು ಅಲ್ಲ, ಅದು ಶಾಸನದಿಂದ ನೀಡಲ್ಪಟ್ಟ ಹಕ್ಕು ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ಜೂನ್ 21 ರಿಂದ ಆಗಸ್ಟ್ 1 ರವರೆಗೆ ನಿವೃತ್ತರಾದ ಸದಸ್ಯರ ಸ್ಥಾನಗಳನ್ನು ಭರ್ತಿ ಮಾಡಲು ಮೇ 12 ರಂದು ರಾಜ್ಯಸಭೆಗೆ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಈ ವೇಳೆ ಅನುಮೋದಕರಿಲ್ಲದೆ ನಾಮಪತ್ರ ಸಲ್ಲಿಸಲು ಮುಂದಾಗಿದ್ದ ಅರ್ಜಿದಾರ ವಿಶ್ವನಾಥ್ ಪ್ರತಾಪ್ ಸಿಂಗ್ ತಮ್ಮ ನಾಮಪತ್ರ ಸ್ವೀಕೃತಿಗೆ ನಿರಾಕರಿಸುವ ಮೂಲಕ ವಾಕ್ ಮತ್ತು ಮೂಲಭೂತ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸಲಾಗಿದೆ ಎಂದು ದೆಹಲಿ ಹೈಕೋರ್ಟ್‌ಗೆ ತಕರಾರು ಸಲ್ಲಿಸಿದ್ದರು.

ಸಿಎಂ ಏಕನಾಥ ಶಿಂದೆ ಸಂಚರಿಸಿದ ಸ್ಥಳಗಳಲ್ಲಿ ಗೋಮೂತ್ರದಿಂದ ಶುದ್ಧಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button