Latest

ಸಿಎಂ ಏಕನಾಥ ಶಿಂದೆ ಸಂಚರಿಸಿದ ಸ್ಥಳಗಳಲ್ಲಿ ಗೋಮೂತ್ರದಿಂದ ಶುದ್ಧಿ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನಾ ಬಣಗಳ ಆಂತರಿಕ ವೈಷಮ್ಯ ಯಾವ ಮಟ್ಟಕ್ಕೆ ಬೆಳೆದಿದೆ ಎಂದರೆ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಕಾರ್ಯಕ್ರಮವೊಂದರ ನಂತರ ಮಾಜಿ ಸಿಎಂ ಉದ್ಧವ ಠಾಕ್ರೆ ಬಣದ ಕಾರ್ಯಕರ್ತರು ಗೋಮೂತ್ರ ಸಿಂಪಡಿಸಿ ಸ್ಥಳ ಶುದ್ಧಿ ಕೈಗೊಳ್ಳುತ್ತಿರುವ ವಿಡಿಯೊ ಚಿತ್ರಣವೊಂದು ವೈರಲ್ ಆಗಿದೆ.

ಔರಂಗಾಬಾದ್ ನಲ್ಲಿ ಮಂಗಳವಾರ ಏಕನಾಥ ಶಿಂದೆ ಅವರ ಕಾರ್ಯಕ್ರಮವೊಂದು ನಡೆಯಿತು. ಕಾರ್ಯಕ್ರಮ ಮುಗಿಸಿ ಏಕನ ಏಕನಾಥ ಶಿಂದೆ ಅವರು ತೆರಳಿದ ನಂತರ ಅವರ ಬೆಂಗಾವಲು ಪಡೆ ಕೆಲ ಬೀದಿಗಳಲ್ಲಿ ದಾಟುತ್ತಿದ್ದ ಸಂದರ್ಭದಲ್ಲಿ ಉದ್ಧವ್ ಠಾಕ್ರೆ ಬಣದ ಕೆಲವರು ರಸ್ತೆಯಲ್ಲಿ ಗೋಮೂತ್ರ ಸಿಂಪಡಿಸಿದರು. ಇವರಲ್ಲಿ ಕೆಲವರು ನಿಂಬೆ ಹಣ್ಣಿನ ಎಲೆಗಳನ್ನು ಬಳಸಿ ಗೋಮೂತ್ರ ಸಿಂಪಡಿಸುತ್ತಿದ್ದುದು ಕಂಡುಬಂತು.

Home add -Advt

ಶಿಂದೆ ಅವರು ಸಂಚರಿಸಿದ ಜಾಗವನ್ನು ಶುದ್ಧಿಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾರಾಷ್ಟ್ರ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಹಾಗೂ ಠಾಕ್ರೆ ಬಣದ ಅಂಬಾದಾಸ ದಾನ್ವೆ ಹೇಳಿದ್ದಾರೆ.

ಬೆಳಗಾವಿಯ ಯೋಧ ಹಠಾತ್ ನಿಧನ

Related Articles

Back to top button