Latest

ದೇಶದ ಮೊದಲ ರೊಬೋಟಿಕ್​​ ಸ್ವಾಬ್ ಟೆಸ್ಟಿಂಗ್​​ ಲ್ಯಾಬ್ ರಾಜ್ಯದಲ್ಲಿ ಆರಂಭ

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚುತ್ತಿದ್ದು, ಸ್ವಾಬ್ ಟೆಸ್ಟ್ ಮಾಡಿ ವರದಿ ನೀಡುವುದು ವಿಳಂಬವಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ದೇಶದಲ್ಲೇ ಮೊಟ್ಟಮೊದಲ ಮಾನವ ಸ್ಪರ್ಶ ರಹಿತ ರೊಬೋಟಿಕ್​​ ಸ್ವಾಬ್ ಟೆಸ್ಟಿಂಗ್​​ ಲ್ಯಾಬ್​ ​ಆರಂಭಿಸಿದೆ.

ರೊಬೋಟಿಕ್​​ ಸ್ವಾಬ್ ಟೆಸ್ಟಿಂಗ್​​ ಲ್ಯಾಬ್​​​​ನಿಂದ ಕೊರೋನಾ ಹರಡುವಿಕೆಯನ್ನು ತಡೆಯಬಹುದು. ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೊಂಕು ತಗುಲದಂತೆ ಸ್ವಾಬ್​​​ ಟೆಸ್ಟ್​ ನಡೆಸಬಹುದು ಎನ್ನುವುದು ಇದರ ಉದ್ದೇಶವಾಗಿದೆ.

ಲ್ಯಾಬ್​​​​ನಲ್ಲಿ​​ ಮೊದಲ 96 ಸ್ವಾಬ್​​ ವರದಿಗೆ 3.5 ಗಂಟೆ ಸಮಯ ತಗುಲುತ್ತದೆ. ಇದಾದ ಬಳಿಕ ಪ್ರತೀ 90 ನಿಮಿಷಕ್ಕೆ 96 ಸ್ವಾಬ್ ತಪಾಸಣೆ ನಡೆಸಿ ವರದಿ ನೀಡಬಹುದು. ಒಂದು ದಿನಕ್ಕೆ ಸುಮಾರು 500-800 ಕೇಸುಗಳ ನಿಖರ ಫಲಿತಾಂಶ ದೊರೆಯಲಿದೆ. ಸ್ವಾಬ್ ತೆಗೆಯುವ ವಿಧಾನ ಹೊರತುಪಡಿಸಿ ಸ್ವಾಬ್ ಲ್ಯಾಬ್​​ನಲ್ಲಿ ಪರೀಕ್ಷೆ ಮಾಡಲು 20ರಿಂದ 22 ಜನ ಆರೋಗ್ಯ ಸಿಬ್ಬಂದಿ ಕೆಲಸ ಮಾಡಬೇಕಿತ್ತು. ಆದರೀಗ ಯಾರು ಕೆಲಸ ಮಾಡಬೇಕಿಲ್ಲ. ಒಂದು ಬಾರಿ ಯಾರಾದರೂ ಸ್ವಾಬ್ ತೆಗೆದು ಮಾನವ ಸ್ಪರ್ಶ ರಹಿತ ಲ್ಯಾಬ್ ದ್ವಾರದ ಪಾಸ್ ಬಾಕ್ಸ್ನಲ್ಲಿ ಇರಿಸಬೇಕು. ತನ್ನ ಪಾಡಿಗೆ ಎಲ್ಲ ಕೆಲಸ ಮಾಡಿಕೊಂಡು ಕೇವಲ 90 ನಿಮಿಷಕ್ಕೆ 96 ನಿಖರ ವರದಿ ಹೊರ ಬರಲಿದೆ.

ಈ ಲ್ಯಾಬ್​​ನ ಮತ್ತೊಂದು ವಿಶೇಷತೆ ಎಂದರೆ ಸಂಪೂರ್ಣ ಮಾಲಿನ್ಯ ರಹಿತ. ಕೊಠಡಿಯ ಗಾಳಿ ಪ್ರತಿ ಗಂಟೆಗೆ 36 ಬಾರಿ ಪಿಲ್ಟರ್ ಮಾಡಿ ಹೊಸ ಗಾಳಿ ಹೊರ ಮತ್ತು ಒಳ ಬರುವ ವ್ಯವಸ್ಥೆ ಹೊಂದಿದೆ. ವಾತಾವರಣಕ್ಕೂ ಸಂಪೂರ್ಣ ಮಾಲಿನ್ಯ ರಹಿತ ಗಾಳಿ ಹೊರ ಬಿಡಲಿದೆ. ಇದರಲ್ಲಿ ಬರಿ ವೈರಾಲಜಿ ಟೆಸ್ಟ್ ಮಾತ್ರ ಮಾಡುತ್ತಿದ್ದು, ಬಯೋ ಸೇಫ್ಟಿ ಕ್ಯಾಬಿನೆಟ್, ಕೋಲ್ಡ್ ಸೆಂಟರ್ ಫ್ಯೂಜ್ ಹೊಂದಿದೆ. 18 ಡಿಗ್ರಿಯಲ್ಲಿ ನಿಮಿಷಕ್ಕೆ 15 ಸಾವಿರ ಆರ್​​ಪಿಎಂ ಒಳಗೊಂಡ ವಿಶೇಷ ಲ್ಯಾಬ್ ಇದಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button