*ಮಹಿಳೆಯನ್ನು ಕಚ್ಚಿ ಸಾಯಿಸಿದ್ದ ರಾಟ್ ವೀಲರ್ ನಾಯಿಗಳು ಸಾವು: ಮಾಲೀಕ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ರಸ್ತೆಯಲ್ಲಿ ಹೋಗುತ್ತಿದ ಮಹಿಳೆಯ ಮೇಲೆ ದಾಳಿ ನಡೆಸಿದ್ದ ಎರಡು ರಾಟ್ ವೀಲರ್ ನಾಯಿಗಳು ಮಹಿಳೆಯನ್ನು ಕಚ್ಚಿ ಸಾಯಿಸಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿತ್ತು. ಮಹಿಳೆಯನ್ನು ಬಲಿಪಡೆದಿದ್ದ ರಾಟ್ ವೀಲರ್ ನಾಯಿಗಳು ಈಗ ಸಾವನ್ನಪ್ಪಿವೆ.
ನಾಯಿ ಮಾಲೀಕ ದಾವಣಗೆರೆ ಹೊರವಲಯದ ತೋಟದಲ್ಲಿ ಎರಡು ರಾಟ್ ವೀಲರ್ ನಾಯಿಗಳನ್ನು ಬಿಟ್ಟು ಹೋಗಿದ್ದ. ತೀಟದ ಬಳಿ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಮೇಲೆ ದಾಳಿ ನಡೆಸಿದ್ದ ನಾಯಿಗಳು ಮಹಿಳೆಯನ್ನು ಕಚ್ಚಿ ಕೊಂದು ಹಾಕಿವೆ. ಮಲ್ಲಶಟ್ಟಿಹಳ್ಳಿಯ ಅನಿತಾ (38) ಮೃತ ಮಹಿಳೆ.
ನಾಯಿ ದಾಳಿಯಿಮ್ದ ಮಹಿಳೆ ಸಾವನ್ನಪ್ಪಿದ ಬೆನ್ನಲ್ಲೇ ಸ್ಥಳೀಯರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಮಹಿಳೆಗೆ ಸಾವಿಗೆ ಕಾರಣವಾದ ಎರಡೂ ರಾಟ್ ವೀಲರ್ ನಾಯಿಗಳನ್ನು ಸೆರೆಹಿಡಿದಿದ್ದವು. ಹೀಗೆ ಸೆರೆ ಹಿಡುಯುವಾಗ ಗಾಯಗೊಂಡಿದ್ದ ನಾಯಿಗಳು ಈಗ ಸಾವನ್ನಪ್ಪಿವೆ.
ರಾಟ್ ವೀಲರ್ ನಾಯಿಗಳನ್ನು ತೋಟದಲ್ಲಿ ತಂದು ಬಿಟ್ಟು ಮಹಿಳೆಯ ಸಾವಿಗೆ ಮೂಲ ಕಾರಣನಾದ ನಾಯಿ ಮಾಲಿಕನ ಪತ್ತೆಗಾಗಿ ಸ್ಥಳೀಯರು ಆಗ್ರಹಿಸಿದ್ದರು. ಸದ್ಯ ನಾಯಿ ಮಾಲೀಕ ಪತ್ತೆಯಾಗಿದ್ದು ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶೈಲೇಂದ್ರ ಬಂಧಿತ ಮಾಲೀಕ. ಈತ ದಾವಣಗೆರೆ ಶಿವಾಲಿ ಚಿತ್ರ ಮಂದಿರದ ಮಾಲೀಕರ ಅಳಿಯ ಎಂದು ತಿಳಿದುಬಂದಿದೆ.



