Latest

ರಾಜ್ಯದ ವಸತಿ ಶಾಲೆಗಳಲ್ಲಿ ಪ್ರಶಿಕ್ಷಣ ಶಿಬಿರಕ್ಕೆ ಭಾರಿ ವಿರೋಧ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ವಸತಿ ಶಾಲೆಗಳಲ್ಲಿ ಆರ್ ಎಸ್ ಎಸ್ ಶಿಕ್ಷಣ ಶಿಬಿರಗಳಿಗೆ ಅನುಮತಿ ನೀಡಿರುವುದು ಹೊಸದೊಂದು ವಿವಾದಕ್ಕೆ ಕಾರಣವಾಗಿದೆ.

ವಸತಿ ಶಾಲೆಗಳಲ್ಲಿ ಆರ್ ಎಸ್ ಎಸ್ ಪ್ರಶಿಕ್ಷಣ ಶಿಬಿರ ಆಯೋಜನೆಗೆ ಅನುಮತಿ ನೀಡಿರುವುದು ವಿವಿಧ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಭಾರಿ ಚರ್ಚೆ ನಡೆದಿದೆ.

ಕೋಲಾರದ ಕೂತಾಂಡ್ಲಹಳ್ಳಿ ಬಳಿ ಇರುವ ವಸತಿ ಶಾಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಶಿಕ್ಷಣ ಶಿಬಿರಕ್ಕೆ ಅನುಮತಿ ನೀಡಿರುವುದು ಚರ್ಚೆಗೆ ಕಾರಣವಾಗಿದೆ.

ಅನುಮತಿ ಪತ್ರದಲ್ಲಿ ಆರ್ ಎಸ್ ಎಸ್ ಶಿಬಿರ ಎಂಬ ಹೆಸರು ಉಲ್ಲೇಖವಿಲ್ಲ. ಆದರೆ ವ್ಯಕ್ತಿತ್ವ ವಿಕಸನ, ಯೋಗಾಸನ, ರಾಷ್ಟ್ರೀಯ ಚಿಂತನೆ ನಿಟ್ಟಿನಲ್ಲಿ ವಸತಿ ಶಾಲೆಗಳಲ್ಲಿ ಒಂದು ವಾರ ಶಿಬಿರ ನಡೆಸಲು ಅನುಮತಿ ನೀಡಲಾಗಿದೆ. ಇದು ಆರ್ ಎಸ್ ಎಸ್ ಆಯೋಜಿತ ಶಿಬಿರವಾಗಿದೆ ಎಂಬುದು ಎಸ್ ಎಫ್ ಐ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳವಾದ. ಹಾಗಾಗಿ ಶಾಲೆಗಳಲ್ಲಿ ಪ್ರಶಿಕ್ಷಣ ಶಿಬಿರ ನಡೆಸದಂತೆ ಆಗ್ರಹಗಳು ಕೇಳಿಬಂದಿದೆ

Home add -Advt

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ಆರ್ ಎಸ್ ಎಸ್ ಸಂಘಟನೆಗಳಿಗೆ ಶಿಬಿರಕ್ಕೆ ನಾವು ಅವಕಾಶಕೊಟ್ಟಿಲ್ಲ. ಶಾಲೆಗಳಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಶಿಬಿರ ಆಯೋಜಿಸಿದರೆ ಅದಕ್ಕೆ ಆರ್ ಎಸ್ ಎಸ್ ಶಿಬಿರ ಎಂದು ಆರೋಪಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಕಟ್ಟಡ ಕುಸಿತ; ಇಬ್ಬರು ದುರ್ಮರಣ

https://pragati.taskdun.com/latest/mahadevapurabuilding-collapse3-death/

Related Articles

Back to top button