Latest

ತಹಶೀಲ್ದಾರ್ ನರಸಿಂಹಮೂರ್ತಿ ಗೆ ದಂಡ ವಿಧಿಸಿದ ಮಾಹಿತಿ ಆಯೋಗ

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಆರ್ ಟಿಐ ಅಡಿ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದರೂ ಮಾಹಿತಿ ನೀಡದೇ ಸತಾಯಿಸುತ್ತಿದ್ದ ಮದ್ದೂರು ತಹಶೀಲ್ದಾರ್ ನರಸಿಂಹಮೂರ್ತಿ ಗೆ 7,500 ರೂಪಾಯಿ ದಂಡ ವಿಧಿಸಲಾಗಿದೆ.

ನಾರಾಯಣಸ್ವಾಮಿ ಎಂಬುವವರು ಆರ್.ಟಿ.ಐ ಬಳಿ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ದರು. ನಿಯಮದ ಪ್ರಕಾರ 30 ದಿನಗಳಾದರೂ ಅಧಿಕಾರಿಗಳು ಮಾಹಿತಿ ಕೊಟ್ಟಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಅರ್ಜಿದಾರ ಕರ್ನಾಟಕ ಮಾಹಿತಿ ಆಯೋಗದ ಮೊರೆ ಹೋಗಿದ್ದರು.

ಒಂದು ವರ್ಷದ ಬಳಿಕ ಇದು ಹಳೇ ಮಾಹಿತಿ ನಮ್ಮಲ್ಲಿ ಕಡತಗಳಿಲ್ಲ ಎಂದು ಉತ್ತರ ಬಂಧಿತ್ತು. ಆದರೆ ಈ ಕಡತ ಶಾಶ್ವತ ದಾಖಲೆ ಆಗಿರುವುದರಿಂದ ಮಾಹಿತಿ ನೀಡಬೇಕಿತ್ತು. ಕಡತ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಆಯೋಗದಿಂದಲೂ ನೋಟೀಸ್ ಜಾರಿಯಾಗಿತ್ತು. ನೋಟೀಸ್ ಗೆ ಲಿಖಿತ ಉತ್ತರ ನೀಡದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಗೆ 7,500ರೂಪಾಯಿ ದಂಡವಿಧಿಸಿದೆ.

ತಹಶೀಲ್ದಾರ್ ಅವರ ಮಾಸಿಕ ಸಂಬಳದಲ್ಲಿಯೇ ದಂಡ ಕಡಿತಗೊಳಿಸುವಮ್ತೆ ಆದೇಶ ನೀಡಲಾಗಿದೆ.

ಪಿಎಸ್ ಐ ಹಗರಣ ಸಿಬಿಐಗೆ ಒಪ್ಪಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಆಗ್ರಹ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button