ಅಭಿವೃದ್ಧಿಯೊಂದೇ ನನ್ನ ಕನಸು;ದಯವಿಟ್ಟು ಬಿಟ್ಟು ಬಿಡಿ; ಕಿರುಕುಳಕ್ಕೆ ಬೇಸತ್ತಿದ್ದೇನೆ ಎಂದು ಗದ್ಗದಿತರಾದ ಶಾಸಕ ರಾಮದಾಸ್
ಪ್ರಗತಿವಾಹಿನಿ ಸುದ್ದಿ; ಮೈಸೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ ರಾಜಕೀಯ ತಿರುವು ಪಡೆದುಕೊಂಡಿದ್ದು, ಶಾಸಕ ಎಸ್.ಎ.ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ನಡುವಿನ ಜಟಾಪಟಿಗೆ ಕಾರಣವಾಗಿದೆ. ದಯವಿಟ್ಟು ಈ ವಿಚಾರವಾಗಿ ಏನನ್ನೂ ಕೇಳಬೇಡಿ. ಸಿಎಂ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ಸಮಿತಿ ರಚಿಸಲು ಹೇಳಿದ್ದೇನೆ. ತಪ್ಪಾಗಿದ್ದರೆ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಶಾಸಕ ರಾಮದಾಸ್, ಗುಂಬಜ್ ಮಾದರಿಯ ಬಸ್ ನಿಲ್ದಾಣವನ್ನೇ ಮುಂದಿಟ್ಟುಕೊಂಡು ಪಕ್ಷದಿಂದ ನನ್ನನ್ನು ಬಿಡಿಸಲು ಕಿರುಕುಳ ನೀಡುತ್ತಿದ್ದಾರೆ. ಕಿರುಕುಳದಿಂದ ಬೇಸತ್ತು ಹೋಗಿದ್ದೇನೆ. ಎಲ್ಲವನ್ನೂ ಬಿಟ್ಟು ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಿದ್ದೇನೆ. ಅನಗತ್ಯವಾಗಿ ಈ ವಿಚಾರ ಆರಂಭಿಸಿ ವಿವಾದ ಮಾಡುತ್ತಿದ್ದಾರೆ. ನೀಲನಕ್ಷೆಯಲ್ಲಿ ಏನಿದೆ ಎಂಬುದನ್ನು ಚರ್ಚಿಯೇ ಕೆಲಸ ಮಾಡುತ್ತಿರುವು ಎಂದು ಹೇಳಿದರು.
ನೊಂದು ಕೆಲವೊಂದು ಮಾತನ್ನು ಹೇಳುತ್ತಿದ್ದೇನೆ. ಹಲವು ವರ್ಷದಿಂದ ಕಿರುಕುಳ ಕೊಟ್ಟು ಕೊಟ್ಟು ಬೇಸರಗೊಂಡು ಬಿಜೆಪಿಯ 11 ಶಾಸಕರಲ್ಲಿ 10 ಜನ ಪಕ್ಷವನ್ನೇ ಬಿಟ್ಟು ಹೋದರು. ಈಗ ನಾನೊಬ್ಬ ಇದ್ದೇನೆ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ. ಒಬ್ಬ ಶಾಸಕನಾಗಿ ಕ್ಷೇತ್ರದ ಜನತೆಗಾಗಿ ಏನನ್ನಾದರೂ ಮಾಡಬೇಕು ಎಂದು ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಿದ್ದೇನೆ.ಭಿವೃದ್ಧಿ ಕೆಲಸ ಮಾತ್ರ ನನ್ನ ಕನಸು. ಸಾಯುವ ಮುನ್ನ ಏನನ್ನಾದರೂ ಸಾಧಿಸಿ ಹೋಗಬೇಕು ಎಂಬುದು ನನ್ನ ಗುರಿ. ಅದನ್ನು ಮಾಡಲು ಬಿಡಿ. ನಾನು ಹೇಳುವುದೆಲ್ಲವನ್ನೂ ಈಗಾಗಲೇ ಹೇಳಿದ್ದೇನೆ. ಮತ್ತೆ ಮತ್ತೆ ಕೇಳಬೇಡಿ. ಮಾದ್ಯಮದವರನ್ನು ಕೈಮುಗಿದು ಕೇಳುತ್ತೇನೆ ದಯಮಾಡಿ ಬಿಟ್ಟುಬಿಡಿ ಎಂದು ಗದ್ಗದಿತರಾದರು.
ಬಸ್ ನಿಲ್ದಾಣ ವಿಚಾರವಾಗಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸಮಿತಿ ರಚಿಸಿ ಎಂದಿದ್ದೇನೆ. ತಜ್ಞರ ಸಮಿತಿ ರಚಿಸಲಿ ಇಲ್ಲಿ ಬಂದು ಪರಿಶೀಲನೆ ನಡೆಸಲಿ. ತಪ್ಪಾಗಿದ್ದರೆ ಕ್ಷಮಿಸಿ ಶಿಕ್ಷೆ ಅನುಭವಿಸಲು ಸಿದ್ಧ. ನಷ್ಟದ ಹಣವನ್ನು ಕೂಡ ನಾನೇ ಭರಿಸುತ್ತೇನೆ. ಸಂಬಳದಲ್ಲಿ ಪಾವತಿಸುವುದಾಗಿಯೂ ಹೇಳಿದ್ದೇನೆ. ರಾಜ್ಯಾಧ್ಯಕ್ಷರನ್ನೂ ಭೇಟಿಯಾಗಿ ಮಾಹಿತಿ ನೀಡಿದ್ದೇನೆ. ಇದಕ್ಕಿಂತ ಹೆಚ್ಚಾಗಿ ನಾನು ಏನು ಹೇಳಲು ಸಾಧ್ಯ? ದಯಮಾಡಿ ಕೆಲಸ ಮಾಡಲು ಬಿಡಿ ಎಂದು ಕೈಮುಗಿದು ಕೇಳಿದ್ದಾರೆ.
ಸ್ವಪಕ್ಷೀಯ ನಾಯಕರ ಜಟಾಪಟಿಗೆ ಕಾರಣವಾದ ಗುಂಬಜ್ ಗಲಾಟೆ
https://pragati.taskdun.com/gumbaz-stile-bus-standmp-pratap-simhas-a-ramadasreaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ