Latest

ಇಂದು ಕಾಂಗ್ರೆಸ್ ನತ್ತ ಸದಾನಂದ ಗೌಡ ಆಪ್ತ

ಪ್ರಗತಿವಾಹಿನಿ ಸುದ್ದಿ, ಮಂಗಳೂರು: ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರ ಆಪ್ತ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ, ಉದ್ಯಮಿ ಅಶೋಕ್ ಕುಮಾರ್ ರೈ ಕೈ ಪಕ್ಷದ ತೆಕ್ಕೆಗೆ ಬಿದ್ದಿದ್ದಾರೆ.

ಇಂದು ಮಧ್ಯಾಹ್ನ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ. ಮೂಲತಃ ಪುತ್ತೂರಿನವರಾದ ಅಶೋಕ್ ಕುಮಾರ್ ರೈ ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಆಪ್ತರಾಗಿದ್ದರು.

ಅಶೋಕಕುಮಾರ್ ರೈ ಅವರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಎಂಬ ವಿಷಯ ಕಳೆದ ಹಲವು ದಿನಗಳಿಂದ ಹೊಗೆಯಾಡುತ್ತಿತ್ತು.  ಆದರೆ ಇದರೊಂದಿಗೇ ಸಂದೇಹ, ಆಶ್ಚರ್ಯಗಳೂ ವ್ಯಕ್ತವಾಗಿದ್ದವು.

ಅವರು ಇಂದು ತಮ್ಮಬೆಂಬಲಿಗರೊಂದಿಗೆ ಮಂಗಳೂರಿನಲ್ಲಿ ನಡೆಯಲಿರುವ ಪ್ರಜಾಧ್ವನಿ ಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಯು.ಟಿ. ಖಾದರ್ ಮುಂತಾದವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.

ತಾವು ವೈಯಕ್ತಿಯವಾಗಿ ಯಾರಿಗಾದರೂ ನೆರವಾಗಬಹುದು. ಆದರೆ ಸಾಮುದಾಯಿಕವಾಗಿ ನೆರವಾಗಬೇಕೆಂದರೆ ಹಣಕ್ಕಿಂತ ಮುಖ್ಯವಾಗಿ ರಾಜಕೀಯ ಬೇಕೇಬೇಕು. ರಾಜಕೀಯಕ್ಕೆ ಬರಬೇಕೋ, ಬೇಡವೋ ಎಂಬ ನಿರ್ಧಾರ ತಳೆಯಲು ನಾಲ್ಕೈದು ವರ್ಚಗಳು ಕಳೆದುಹೋದವು. ನಿತ್ಯ ತಮ್ಮ ಸಂಸ್ಥೆಗೆ ನಾನಾ ಕೆಲಸಗಳಿಗಾಗಿ ಬರುವ ಜನರನ್ನು ಕಂಡಾಗ ರಾಜಕೀಯ ಸೇರಲೇಬೇಕು ಎಂಬ ನಿರ್ಧಾರ ತಳೆದಿದ್ದಾಗಿ ರೈ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

ತಮಗೆ ಹಿರಿಯ ರಾಜಕೀಯ ನಾಯಕರೊಂದಿಗೆ ಸ್ನೇಹವಿದ್ದರೂ ತಮ್ಮ ರಾಜಕೀಯಕ್ಕೂ ಆ ಸ್ನೇಹಕ್ಕೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಬಿಜೆಪಿ ಹಿಡಿತದಲ್ಲಿರುವ ಪುತ್ತೂರು ಕ್ಷೇತ್ರದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಶೋಕ ರೈ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ ಎಂಬ ವಿಶ್ಲೇಷಣೆಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದ್ದು ಮುಂದಿನ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.

ರಮೇಶ ಜಾರಕಿಹೊಳಿ ಹಣ ಹಂಚುತ್ತಲೇ ಚುನಾವಣೆ ಗೆಲ್ಲುತ್ತಿದ್ದಾರೆ: ಅಶೋಕ ಪೂಜಾರಿ ಆರೋಪ

https://pragati.taskdun.com/ramesh-jarkiholi-wins-election-by-distrebuting-money-to-voters/

2ಸಾವಿರ ವಿದ್ಯಾರ್ಥಿಗಳಿಂದ ಸಿಎಂಗೆ ಪತ್ರ

https://pragati.taskdun.com/2000-bengaluru-students-write-to-karnataka-cm-opposing-sankey-flyover/

ಗೌನ್ ಧರಿಸಲು ಹೋಗಿ ಗುಂಡೇಟು ಹಾಕಿಕೊಂಡ ನ್ಯಾಯಾಧೀಶ

https://pragati.taskdun.com/the-judge-who-went-to-wear-a-gown-and-shot-himself/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button