GIT add 2024-1
Laxmi Tai add
Beereshwara 33

ರಮೇಶ ಜಾರಕಿಹೊಳಿ ಹಣ ಹಂಚುತ್ತಲೇ ಚುನಾವಣೆ ಗೆಲ್ಲುತ್ತಿದ್ದಾರೆ: ಅಶೋಕ ಪೂಜಾರಿ ಆರೋಪ

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡ

Anvekar 3
Cancer Hospital 2

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಕುರಿತು ಕೆಟ್ಟ ಹುಳ ಎಂಬ ಶಬ್ದ ಬಳಸಿದ್ದು ಸರಿಯಲ್ಲ, ಇಂತಹ ಮಾತುಗಳು ರಮೇಶ ಜಾರಕಿಹೊಳಿ ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಗೋಕಾಕದಲ್ಲಿ ಹಣ ಹಂಚಿಯೇ ಗೆಲ್ಲುತ್ತ ಬಂದಿದ್ದಾರೆ. ಆದರೆ ಇತ್ತೀಚೆಗೆ ಸುಳೇಬಾವಿಯಲ್ಲಿ ನಡೆದ ಅವರ ಅಭಿಮಾನಿಗಳ ಸಮಾವೇಶದಲ್ಲಿ ರಮೇಶ ಜಾರಕಿಹೊಳಿ ಹಣ ಹಂಚದೆ ಚುನಾವಣೆ ಗೆದ್ದಿದ್ದೇನೆ ಎಂಬ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ

2018ರ ಚುನಾವಣೆಯಲ್ಲಿ  ರಮೇಶ ಜಾರಕಿಹೊಳಿ ಪರವಾಗಿ ಹಣ ಹಂಚುತ್ತಿದ್ದವರನ್ನು ನೂರಾರು ಜನರನ್ನು ಹಿಡಿದು ಪ್ರಕರಣ ದಾಖಲಿಸಲು ಮುಂದಾದಾಗ ಅಧಿಕಾರಿಗಳು ಪ್ರಕರಣ ದಾಖಲು ಮಾಡಿರಲಿಲ್ಲ. ಆದರೆ ಧರಣಿ ಕುಳಿತು ಪ್ರಕರಣ ದಾಖಲಿಸಲಾಗಿದೆ ಎಂದು ಎಫ್‍ಐಆರ್ ಪ್ರತಿ ಪ್ರದರ್ಶಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಗೋಕಾಕ ಕ್ಷೇತ್ರದಲ್ಲಿ 50 ಕೋಟಿ ರೂ. ಖರ್ಚು ಮಾಡುತ್ತಾರೆ ಎಂಬ ಸುದ್ದಿ ಇದೆ. ಅಂದರೆ ಪ್ರತಿ ಮತಕ್ಕೆ ಸಾವಿರಾರು ರೂ. ಹಣ ಕೊಡುವುದು ನಿಶ್ಚಿತ ಎಂದು ಆರೋಪಿಸಿದರು.

Emergency Service

ನಾನು ಕಾಂಗ್ರೆಸ್ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ದೇನೆ. ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸುತ್ತೇನೆ. ಪ್ರಾಮಾಣಿಕವಾಗಿ ಚುನಾವಣೆ ನಡೆದು ಸಹ ನಾನು ಸೋತರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ಕರಮೋಶಿ, ಚನಗೌಡ ಮರಲಿಂಗನವರ, ಮುಸ್ತಾಕ್, ಸಿದ್ದಪ್ಪ ಶಿರಸಂಗಿ ಮೊದಲಾದವರು ಇದ್ದರು.

*ರಚಿತಾ ರಾಮ್ ಗಡಿಪಾರಿಗೆ ಆಗ್ರಹ; ಕಾರಣವೇನು?*

https://pragati.taskdun.com/rachita-ramcontroversial-statmentcomplaint-file/

 

Bottom Add3
Bottom Ad 2