Latest

ಮಕ್ಕಳ ಕಳುವು ಶಂಕೆ; ಸಾಧುಗಳ ಮೇಲೆ ತೀವ್ರ ಹಲ್ಲೆ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಮಹಾರಾಷ್ಟ್ರದ ಸಾಂಗ್ಲಿಯ ಲವಂಗಾ ಗ್ರಾಮದಲ್ಲಿ ಮಕ್ಕಳ ಕಳುವು ಮಾಡುವವರೆಂದು ಶಂಕಿಸಿ ಗುಂಪೊಂದು ನಾಲ್ವರು ಸಾಧುಗಳ ಮೇಲೆ ತೀವ್ರ ಹಲ್ಲೆ ನಡೆಸಿದೆ.

ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ವೈರಲ್ ಆಗಿದೆ. ಉತ್ತರ ಪ್ರದೇಶ ಮೂಲದ ನಾಲ್ವರು ಸಾಧುಗಳು ಕಾರಿನಲ್ಲಿ ಕರ್ನಾಟಕದ ವಿಜಯಪುರದಿಂದ ಪಂಢರಪುರದ ದೇವಸ್ಥಾನದ ಕಡೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Home add -Advt

ಗುಂಪಿನ ಸದಸ್ಯರು ದೊಣ್ಣೆಗಳಿಂದ ಸಾಧುಗಳ ಮೇಲೆ ಹಲ್ಲೆ ನಡೆಸಿದ್ದು ವಿಡಿಯೋದಲ್ಲಿ ಚಿತ್ರೀಕರಣವಾಗಿದೆ. ಇತ್ತ ಬೆಳಗಾವಿ ಭಾಗದಲ್ಲೂ ಮಕ್ಕಳ ಕಳುವು ಪ್ರಕರಣ ವದಂತಿ ತೀವ್ರತೆ ಪಡೆದಿರುವ ಬೆನ್ನಲ್ಲೇ ಈ ಘಟನೆ ಇನ್ನಷ್ಟು ಸಂದೇಹಗಳನ್ನು ಹುಟ್ಟುಹಾಕಿದೆ.

ಮಕ್ಕಳ ಕಳ್ಳರ ಜಾಲ ಎಂಬ ವದಂತಿ; ಇಬ್ಬರು ಶಂಕಿತರ ಬಂಧನ

Related Articles

Back to top button