Belagavi NewsBelgaum NewsCrimeKannada NewsKarnataka News

*ಬೆಳಗಾವಿಯಲ್ಲಿ ಅಂದರ್-ಬಾಹರ್: 7 ಜನ ಅಂದರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಥಣಿ ತಾಲೂಕಿನ ಕಾಡಸಿದ್ದೇಶ್ವರ ಆಶ್ರಮ ಹತ್ತಿರ ತಂಗಡಿ ಸಿನ್ನಾಳ ರಸ್ತೆ ಬದಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಆಡುತ್ತಿದ್ದ 7 ಜನರನ್ನು ಬಂಧಿಸಿ 10,500 ರೂಪಾಯಿ, 5 ಮೊಬೈಲಗಳು ಹಾಗೂ 5 ಬೈಕ್ ವಶಕ್ಕೆ ಪಡೆಯಲಾಗಿದೆ. 

ಆರೋಪಿಗಳಾದ ಮಹಾನಿಂಗ ರಾಮಪ್ಪ ಮಾಳಿಣ ಶಶಿಕಾಂತ ಹರೀಬಾ ಕಾಂಬಳೆ, ಆಸೀಪ ಅಸ್ಪಾಕಹುಸೇನ ದೇಸಾಯಿ, ರವಿ ಶೇಖರ ಕುಂಬಾರ, ನೀಸಾರ ಮಹ್ಮದ ಡಾಂಗೆ, ಲಿಯಾಜ ಹಸನಸಾಬ ಫಕಾಲಿ ಹಾಗುಯ ಪ್ರವೀಣ ರಾಚಪ್ಪ ಗೌಡಪ್ಪನವರ  ಎಂಬುವರನ್ನು ಬಂಧಿಸಲಾಗಿದೆ.

Home add -Advt

ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಮೇಲೆ 10.500 ರೂಪಾಯಿ ಹಣವನ್ನು ಪಣಕ್ಕೆ ಇಟ್ಟು ಅಂದರ-ಬಾಹರ್ ಅಂಬುವ ಜೂಜಾಟ ಆಡುತ್ತಿದ್ದರು.

ಈ ಬಗ್ಗೆ ಅಥಣಿ ಪೊಲೀಸ ಠಾಣಾ ಅಪರಾಧ ಸಂಖ್ಯೆ 85/2026 ಕಲಂ 87 ಕೆ.ಪಿ. ಆ್ಯಕ್ಟ್ 112 ಬಿಎನ್ಎಎಸ್ ಆಕ್ಟ-2023 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Related Articles

Back to top button