Latest

ಮಣ್ಣಲ್ಲಿ ಚಿರ ಸ್ಥಾಯಿಯಾದ ಸ್ಯಾಂಡಲ್ ವುಡ್ ಚಿರಂಜೀವಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೃದಯಾಘಾತದಿಂದ ನಿನ್ನೆ ಮೃತಪಟ್ಟಿದ್ದ ಸಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ (39) ಅವರ ಅಂತ್ಯಕ್ರಿಯೆ ಬೆಂಗಳೂರಿನ ನೆಲಗುಳಿ ಗ್ರಾಮದಲ್ಲಿ ಹಿಂದೂ ಸಂಪ್ರದಾಯದಂತೆ ನೆರವೇರಿತು.

ಚಿರು ಪಾರ್ಥೀವಶರೀರವನ್ನು ಬೆಂಗಳೂರಿನ ಬಸವನಗುಡಿಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ಮಧ್ಯಾಹ್ನ 1:30ರವರೆಗೆ ಇರಿಸಲಾಗಿತ್ತು. ಬಳಿಕ ಬಸವನಗುಡಿ ಮನೆಯಿಂದ ಕನಕಪುರ ರಸ್ತೆಯಲ್ಲಿರುವ ನೆಲಗುಳಿ ಗ್ರಾಮದ ನಟ ಧ್ರುವ ಸರ್ಜಾ ಫಾರ್ಮ್ ಹೌಸ್ ಗೆ ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ತರಲಾಯಿತು.

Home add -Advt

ಮೆರವಣಿಗೆಯಲ್ಲಿ ರಸ್ತೆಯುದ್ದಕ್ಕೂ ಸಾವಿರಾರು ಅಭಿಮಾನಿಗಳು ಭಾಗಿಯಾಗಿದ್ದರು. ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಪತ್ನಿ ಮೇಘನಾ ರಾಜ್ ಪತಿ ಚಿರು ಪಾರ್ಥೀವ ಶರೀರವನ್ನು ತಬ್ಬಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ, ಸರ್ಜಾ ಕುಟುಂಬಸ್ಥರ ಕಣ್ಣೀರು ಮನಕಲಕುವಂತಿತ್ತು.

ಅಂತಿಮವಾಗಿ ಸಮಾಧಿಯಲ್ಲಿ ಚಿರು ಪಾರ್ಥೀವ ಶರೀರವನ್ನಿಟ್ಟು ಅಂತ್ಯಕ್ರಿಯೆ ನೆರವೇರಿಸಲಾಯಿತು.

Related Articles

Back to top button