ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್ ಅವರಿಗೆ ಕೆಜಿಎಫ್ ಚಿತ್ರತಂಡ ಭರ್ಜರಿ ಗಿಫ್ಟ್ ನೀಡಿದೆ. ಕೆಜಿಎಫ್ ನಲ್ಲಿ ಸಂಜಯ್ ದತ್ ಪಾತ್ರವಾಗಿರುವ ಅಧೀರನ ಲುಕ್ ಅನಾವರಣಗೊಂಡಿದೆ.
ಸಂಜಯ್ ದತ್ ಹುಟ್ಟುಹಬ್ಬದ ಹಿನ್ನೆಲೆ ಹೊಂಬಾಳೆ ಫಿಲಂಸ್ ಅಧೀರನ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಮುನ್ನಾಭಾಯಿಗೆ ಬಿಗ್ ಗಿಫ್ಟ್ ನೀಡಿದೆ. ಕೈಯಲ್ಲಿ ಕತ್ತಿ ಹಿಡಿದು ಏನೋ ಯೋಚಿಸೋ ರೀತಿಯಲ್ಲಿ ಅಧೀರ ಕುಳಿತಿದ್ದು, ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಪೋಸ್ಟರ್ ಗೆ ಕ್ರೂರತನಗಳಿಂದ ಪ್ರಭಾವಿತನಾದ ನಿರ್ಭಿತ ಯೋಧ ಎಂದು ಬರೆಯಲಾಗಿರುವುದು ಸಿನಿರಸಿಕರ ಗಮನ ಸೆಳೆದಿದೆ.
ಎರಡು ದಿನಗಳ ಹಿಂದೆ ಕೆಜಿಎಫ್ ತಂಡದಿಂದ ದೊಡ್ಡ ಸುದ್ದಿ ಹೊರ ಬೀಳುವ ಮುನ್ಸೂಚನೆಯನ್ನು ನಿರ್ದೇಶಕ ಪ್ರಶಾಂತ್ ನೀಲ್ ನೀಡಿದ್ದರು. ರಾಕಿಯ ಜೊತೆಗಿನ ಯದ್ಧ ಅಧೀರನ ಯುದ್ಧ ಬಲುರೋಚಕವಾಗಿರಲಿದೆ ಎಂಬುದನ್ನು ಪೋಸ್ಟರ್ ಹೇಳುತ್ತಿದೆ. ಗರುಡನನ್ನ ಮುಗಿಸುವ ರಾಕಿಯ ಮುಂದಿನ ಯುದ್ಧ ಅಧೀರನೊಂದಿಗೆ ಇರಲಿದೆ. ಸಾವಿರಾರು ಜನರ ನಾಯಕನಾಗಿ ರಾಕಿ ಹೇಗೆ ತನ್ನ ಹೊಸ ಸಾಮ್ರಾಜ್ಯ ಕಟ್ಟಲಿದ್ದಾನೆ ಎಂಬು ಚಾಪ್ಟರ್-2ರಲ್ಲಿ ರಿವೀಲ್ ಆಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ