Belagavi NewsBelgaum NewsKannada NewsKarnataka News

*ಮಟಕಾ ಬರೆಯುತ್ತಿದ್ದಾಗಲೆ ರೆಡ್ ಹ್ಯಾಂಡ್ ಆಗಿ ಪೊಲೀಸರ ಬಲೆಗೆ ಬಿದ್ದ ಸಂಜಯ ಪಾಟೀಲ ಬೆಂಬಲಿಗ* *ಗ್ರಾಮೀಣ ಕ್ಷೇತ್ರದಲ್ಲಿ ಗ್ಯಾಂಬ್ಲಿಂಗ್ ಹೆಚ್ಚಾಗುತ್ತಿದೆ ಎಂದು ನಿನ್ನೆಯಷ್ಟೆ ಆರೋಪಿಸಿದ್ದ ಮಾಜಿ ಶಾಸಕ*

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಟಕಾ, ಗ್ಯಾಂಬ್ಲಿಂಗ್ ಹೆಚ್ಚಾಗುತ್ತಿದ್ದು ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ ಮರುದಿನವೇ  ಮಟಕಾ ಬರೆಯುತ್ತಿದ್ದ ಸಂಜಯ ಪಾಟೀಲ ಬೆಂಬಲಿಗ ರೆಡ್ ಹ್ಯಾಂಡ್ ಆಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

ಬಡಸ್ ಕೆಎಚ್ ಲಕ್ಷ್ಮೀ ಗಲ್ಲಿಯ ಪರುಶುರಾಮ ಅರ್ಜುನ ಸುತಾರ (39) ಗಜವತಿ  – ಕುಕಡೊಳ್ಳಿ ರಸ್ತೆಯಲ್ಲಿ ಓಸಿ ಚೀಟಿ ಬರೆಯುತ್ತಿರುವ ಸಂದರ್ಭದಲ್ಲೇ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ. ಆತನಿಂದ 3 ಓಸಿ ಚೀಟ್, 500 ರೂ. ನಗದು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.  ಆತನ ಬಲಗೈ ಮೇಲೆ ಓಂ ಚಿಹ್ನೆ ಮತ್ತು ಎಡಗೈ ಮೇಲೆ ದಾದಾ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಫೋಟೋ ಟ್ಯಾಟೂ ಇದೆ. 

ಪಿಎಸ್ಐ ಅವಿನಾಶ ಯರಗೊಪ್ಪ, ಸಿಬ್ಬಂದಿ ಬಾಬಣ್ಣವರ್, ಪ್ರೀತಮ್ ಕೊಚೇರಿ, ಬಿ.ಸಿ. ಗುನ್ನಗೋಳ ಕಾರ್ಯಾಚರಣೆ ನಡೆಸಿದರು. 

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗ್ಯಾಂಬ್ಲಿಗ್ ಹೆಚ್ಚಾಗಿದ್ದು ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಂಜಯ ಪಾಟೀಲ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ವಿಪರ್ಯಾಸವೆಂದರೆ ಮರುದಿನವೇ ಸಂಜಯ ಪಾಟೀಲ ಬೆಂಬಲಿಗನೇ ಮಟಕಾ ಬರೆಯುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾನೆ. 

Home add -Advt

Related Articles

Back to top button