Latest

30 ವರ್ಷಗಳ ದಾಂಪತ್ಯ; 11 ವರ್ಷಗಳ ವಿಚ್ಛೇದಿತ ಜೀವನ; ಪರಸ್ಪರ 60 ಕೇಸ್ ದಾಖಲಿಸಿಕೊಂಡ ಜೋಡಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: 30 ವರ್ಷಗಳ ದಾಂಪತ್ಯ ಜೀವನ ಹಾಗೂ 11 ವರ್ಷಗಳ ವಿಚ್ಛೇದಿತ ಜೀವನದಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಸಂಬಂಧಿಸಿದಂತೆ 60 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಜೋಡಿಗೆ ಸಂಧಾನದ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.

ಪರಸ್ಪರ 60 ಪ್ರಕರಣಗಳಲ್ಲು ದಾಖಲಿಸ್ಕೊಂಡ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದ ಮುಖ್ಯ ನ್ಯಾಯಮೂರ್ತಿ ಎನ್.ರಮಣ, ಏನು ಮಾಡುವುದು? ಕೆಲವರು ಜಗಳ ಮಾಡಿಕೊಂಡೆ ಇರಲು ಬಯಸುತ್ತಾರೆ. ಇಂತವರು ಯಾವಾಗಲೂ ಕೋರ್ಟ್ ನಲ್ಲಿಯೇ ಇರಲು ಬಯಸುತ್ತಾರೆ. ಕೋರ್ಟ್ ನೋಡದಿದ್ದರೆ ಇವರಿಗೆ ನಿದ್ರೆ ಬರಲ್ಲ ಎಂದು ಗರಂ ಆಗಿದ್ದಾರೆ.

Home add -Advt

ತಮ್ಮ ನಡುವಿನ ವಿವಾದವನ್ನು ಸಂಧಾನದ ಮೂಲಕ ಸೌಹಾರ್ದಯುತವಾಗಿ ಇತ್ಯರ್ಥ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಅಲ್ಲದೇ ಮಧ್ಯಸ್ಥಿಕೆಗೆ ಸಮಯ ಬೇಕಾಗುತ್ತದೆ. ಹೀಗಾಗಿ ಬಾಕಿ ಇರುವ ಪ್ರಕರಣಗಳನ್ನು ಮುಂದುವರೆಸಲು ಅವಕಾಶ ನೀಡಲಾಗದು ಎಂದು ನ್ಯಾಯಪೀಠ ತಿಳಿಸಿದೆ.

ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ ಗೊತ್ತೆ?

Related Articles

Back to top button