*ಸತೀಶ್ ಜಾರಕಿಹೋಳಿ ಚತುರ ರಾಜಕಾರಣಿ: ಪ್ರಕಾಶ್ ಹುಕ್ಕೇರಿ*

ಪ್ರಗತಿವಾಹಿನಿ ಸುದ್ದಿ: ಕಳೆದ 40 ವರ್ಷಗಳಿಂದ ರಾಜಕೀಯದಲ್ಲಿ ಇದ್ದುಕೊಂಡು ಜನರ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದೇನೆ. ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಈ ಹಿನ್ನೆಲೆಯಲ್ಲಿ ಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಪ್ರೀಯಾಂಕಾ ಜಾರಕಿಹೋಳಿಯವರನ್ನು ಪ್ರಚಂಡ ಬಹುಮತಗಳಿಂದ ಗೆಲ್ಲಿಸಿಕೊಂಡು ಬರೋಣಾ ಎಂದು ವಿಧಾನಪರಿಷತ್ ಸದಸ್ಯ, ಕರ್ನಾಟಕದ ದೆಹಲಿಯ ವಿಶೇಷ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ ಹೇಳಿದರು.
ಅವರು ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರದ ಚಂದೂರ ಗ್ರಾಮದಲ್ಲಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರೀಯಾಂಕ ಜಾರಕಿಹೋಳಿ ಪ್ರಚಾರರ್ಥವಾಗಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ವಿಧಾನಸಭಾ ಚುನಾವಣೆಯಲ್ಲಿ ಪಂಚಗ್ಯಾರಂಟಿಗಳ ಭರವಸೆ ಬಳಿಕ ಕಾಂಗ್ರೆಸ್ ನ136 ಶಾಸಕರು ಗೆದ್ದು ಬಂದರು. ಈ ಶ್ರೇಯಸ್ಸು ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಲ್ಲುತ್ತದೆ.ಲೋಕಸಭಾ ಕ್ಷೇತ್ರದಲ್ಲಿ 5 ಜನ ಕಾಂಗ್ರೆಸ್ಸಿಗರು ಇರುವುದರಿಂದ ಪ್ರೀಯಾಂಕಾ ಜಾರಕಿಹೋಳಿಯವರ ಗೆಲವು ಸುಲಭವಾಗಲಿದೆ. ಸತೀಶ ಜಾರಕಿಹೋಳಿ ಚತುರ ರಾಜಕಾರಣಿ , ರಾಜ್ಯದಲ್ಲಿ ಪ್ರಭಾವಿ ನಾಯಕ. ಇದರಿಂದಾಗಿ ಪ್ರೀಯಾಂಕಾ ಜಾರಕಿಹೋಳಿಯವರನ್ನು ಗೆಲ್ಲಿಸಿಕೊಂಡು ಬಂದರೆ, ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ್ಯೆ ಸರಿತಾ ಪಾಟೀಲ ಉಪಾಧ್ಯಕ್ಷ, ಚೇತನ ಕಾಂಬಳೆ, ,ವೈಶಾಲಿ ಪಾಟೀಲ, ಪೂಜಾ ಕಾಂಬಳೆ,ಆಕಾಶಿ ಕಾಂಬಳೆ,ಚಂದ್ರಕಾಂತ ಕೃಷ್ಣಾ ಪಾಟೀಲ, ಅಶಕ್ತ ಜಮದಾಡೆ,ಶಶಿಕಾಂತ ಪಾಟೀಲ, ಬಾಲಕೃಷ್ಣ ಮಧ್ಯಪಗೋಳ,ಶಿರಪಾನ ವಡಗೊಲೆ,ಮಲ್ಲಪ್ಪ ಧನಗರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.