ಪ್ರಗತಿವಾಹಿನಿ ಸುದ್ದಿ; ಗೋಕಾಕ: ವಿಪಕ್ಷ ನಾಯಕ ಸಿದ್ದರಾಮಯ್ಯನವರು ಸವದತ್ತಿಯಿಂದ ಸ್ಪರ್ಧಿಸುವ ಕುರಿತು ಇಲ್ಲಿವರೆಗೂ ಚರ್ಚೆಯಾಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಹೇಳಿದರು.
ಪಟ್ಟಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೂಪುರ ಶರ್ಮಾ ವಿವಾದ್ಮಕ ಹೇಳಿಕೆಯನ್ನು ಬಿಜೆಪಿಗರು ಗಂಭೀರವಾಗಿ ಪರಿಗಣಿಸಬೇಕು. ಆಡಳಿತದಲ್ಲಿರುವ ಪಕ್ಷವು ಸಮಾಜದಲ್ಲಿರುವ ಶಾಂತಿ ಕದಡುವ ಯತ್ನಕ್ಕೆ ಮುಂದಾಗಬಾದರು. ಹೇಳಿಕೆ ನೀಡುವ ಮೊದಲು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ. ಬೇಕಾಬಿಟ್ಟಿ ಹೇಳಿಕೆಯಿಂದ ದೇಶದಲ್ಲಿ ಅಂಶಾತಿ ಸೃಷ್ಟಿಯಾಗಿದೆ ಎಂದು ಕಿಡಿಕಾರಿದರು.
ದೇಶದ ವಾತಾವರಣ ಕೆಡುತ್ತದೆ. ಇದಕ್ಕೆ ಬಿಜೆಪಿಯವರು ಕಡಿವಾಣ ಹಾಕಿ, ಅಂತವರನ್ನು ನಿಯಂತ್ರಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ಶಿವಸೇನೆ ಒಡೆದ ಬಳಿಕ ಬಿಜೆಪಿ ಹಾದಿ ಸುಗಮ: ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ಪತನಗೊಳಿಸಲು ಬಿಜೆಪಿ ಎರಡು ಬಾರಿ ಪ್ರಯತ್ನ ಮಾಡಿದೆ. ಆ ಸಂದರ್ಭದಲ್ಲಿ ಶಾಸಕರ ವಿಶ್ವಾಸಗಳಿಸುವಲ್ಲಿ ವಿಫಲವಾಗಿದೆ. ಈ ಬಾರೀ ಎಲ್ಲಾ ಶಾಸಕರಿಗೆ ಇಡಿ, ಐಟಿ ಕೇಸ್ಗಳ ಬಗ್ಗೆ ಒತ್ತಡ ಹೇರಿ, ಪಕ್ಷದಿಂದ ಆಪರ್ ನೀಡಿ ಶಿವಸೇನೆ ಕೋಟೆ ಒಡೆಯಲು ಯಶಸ್ವಿಯಾಗಿದೆ ಎಂದರು.
ರಮೇಶ ಜಾರಕಿಹೊಳಿ ರಣತಂತ್ರದಿಂದ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚೆನೆಯಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದರ ಬಗೆ ನಮಗೆ ಏನು ಗೊತ್ತಿಲ್ಲ ಎಂದರು. ಅಲ್ಲಿನ ಸ್ಥಳೀಯ ಸಮಸ್ಯೆಗಳೇ ಉದ್ಭವಾಗಿವೆ. ಬಿಜೆಪಿಯವರಿಗೆ ಶಿವಸೇನೆ ಸೇರ್ಪಡೆ ಮಾಡಿಕೊಳ್ಳಬೇಕೆಂಬ ಒತ್ತಡ ಬಹಳ ದಿನಗಳಿಂದ ಇತ್ತು. ಠಾಕ್ರೆ ಬರದೇ ಇರುವ ಹಿನ್ನೆಲೆಯಲ್ಲಿ ಬೇರೆ ಬೇರೆ ನಾಯಕರನ್ನು ಹುಟ್ಟು ಹಾಕಿ ಬಿಜೆಪಿ ತನ್ನ ಹಾದಿಯನ್ನು ಸುಗಮ ಮಾಡಿಕೊಂಡಿದೆ ಎಂದರು.
ಕಾಂಗ್ರೆಸ್ ನಿಂದ ಪೌರ ಕಾರ್ಮಿಕರಿಗೆ ನ್ಯಾಯ ಸಿಕ್ಕಿದೆ: ಪೌರ ಕಾರ್ಮಿಕರಿಗೆ ಆಗಿರುವ ಅನ್ಯಾಯ , ಕಾನೂನು ಉಲ್ಲಂಘನೆ ವಿಚಾರವನ್ನು ನಮ್ಮ ಕಾರ್ಯಕರ್ತರು ತಮ್ಮ ಗಮನಕ್ಕೆ ತಂದಿದ್ದಾರೆ. ಅದಕ್ಕೆ ಕಾನೂನಾತ್ಮಕವಾಗಿ ಕಾರ್ಮಿಕ ಇಲಾಖೆಯಲ್ಲಿ ಹೋರಾಟ ಮಾಡಲಾಗಿದೆ. ಹೀಗಾಗಿ ಪೌರಕಾರ್ಮಿಕರಿಗೆ ಸಿಗಬೇಕಾದ ನ್ಯಾಯವನ್ನು ಕೊಡಿಸುವಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಯಶಸ್ವಿಯಾಗಿದ್ದಾರೆ. ಈ ಹೋರಾಟದ ಪ್ರತಿಫಲ ಅವರಿಗೆ ಸಿಕ್ಕಿದೆ. ಕಾಂಗ್ರೆಸ್ ಕಾರ್ಯಕರ್ತರ ಬೆನ್ನು ಹತ್ತಿದವರನ್ನು ಕೆಲಸಕ್ಕೆ ತೆಗೆದುಕೊಳ್ಳುವುದರ ಕುರಿತು ಅವರಿಗೆ ಯಾವುದೇ ಅಧಿಕಾರ ಇಲ್ಲ. ಹೊಸ ಟೆಂಡರ್ ಆಗಬೇಕು. ಅನಧಿಕೃತವಾಗಿ ನಡೆಸುತ್ತಿದ್ದರು ಈಗ ನ್ಯಾಯ ಸಿಕ್ಕಿದೆ ಮುಂದಿನ ನಡೆ ನೋಡೋನ ಎಂದರು.
ವಿದ್ಯಾರ್ಥಿನಿಯರ ಜತೆ ಶಿಕ್ಷಕನ ಅಸಭ್ಯವರ್ತನೆ; ಕಾಮುಕ ಟೀಚರ್ ಸಸ್ಪೆಂಡ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ