Latest

ಕ್ಯಾಬಿನ್ ನಲ್ಲಿ ಕಾಣಿಸಿದ ಹೊಗೆ: ದೆಹಲಿಯಿಂದ ಜಬಲ್ ಪುರಕ್ಕೆ ಹೊರಟಿದ್ದ ವಿಮಾನ ತುರ್ತು ಭೂಸ್ಪರ್ಷ

ಪ್ರಗತಿವಾಹಿನಿ ಸುದ್ದಿ, ನವದೆಹಲಿ:  ದೆಹಲಿಯಿಂದ ಮಧ್ಯಪ್ರದೇಶದ ಜಬಲ್ ಪುರಕ್ಕೆ ಹೊರಟಿದ್ದ ವಿಮಾನದ  ಕ್ಯಾಬಿನ್ ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಪ್ರಯಾಣ ಮೊಟಕುಗೊಳಿಸಿ  ದೆಹಲಿ ವಿಮಾನ ನಿಲ್ದಾಣದಲ್ಲೇ  ತುರ್ತು ಭೂಸ್ಪರ್ಷ ಮಾಡಲಾಗಿದೆ.

ಸ್ಪೈಸ್ ಜೆಟ್ ಎಸ್ ಜಿ- 2862 ವಿಮಾನ ಶನಿವಾರ ಬೆಳಿಗ್ಗೆ  6.15ರ ಸುಮಾರು ುಡ್ಡಯನ ಕೈಗೊಂಡಿತ್ತು. 5 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಅಕಸ್ಮಾತ್ ವಿಮಾನದೊಳಗೆ ಹೊಗೆ ಕಂಡ ಪ್ರಯಾಣಿಕರು ಮಾಹಿತಿ ನೀಡುತ್ತಿದ್ದಂತೆ ಗಮನಿಸಿದ ಪೈಲಟ್ ಗಳು ಪ್ರಯಾಣ ಮೊಟಕುಗೊಳಿಸಿ ದೆಹಲಿಗೆ ಮರಳುವ ನಿರ್ಧಾರ ಕೈಗೊಂಡರು.

Home add -Advt

7 ಗಂಟೆಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಯಿತು. ವಿಮಾನದಲ್ಲಿ ನಾಲ್ವರು ವೈಮಾನಿಕ ಸಿಬ್ಬಂದಿ, ಇಬ್ಬರು ಪೈಲಟ್ ಗಳು ಹಾಗೂ 185 ಪ್ರಯಾಣಿಕರಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ.

ಜಾಲತಾಣದಲ್ಲಿ ನೂಪುರ ಶರ್ಮಾ ಬೆಂಬಲಿಸಿದ ಮೆಡಿಕಲ್ ಶಾಪ್ ಮಾಲೀಕನ ಹತ್ಯೆ

Related Articles

Back to top button