
ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಕುಡಚಿ ಮತಕ್ಷೇತ್ರದ ಸುಲ್ತಾನಪುರ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಸತೀಶ ಜಾರಕಿಹೊಳಿಯವರು ಗ್ರಾ.ಪಂ ಸದಸ್ಯ ಗುರುಪಾದ ಚೌಗಲಾ ಅವರ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿ ಕೆಲವು ಹೊತ್ತು ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಹರಟೆ ಹೊಡೆದು ವಿಶ್ರಾಂತಿ ಪಡೆದರು. ಮುಗಳಖೋಡ, ಪಾಲಬಾವಿ, ಸುಲ್ತಾನಪುರ, ಕಪ್ಪಲಗುದ್ದಿ ಹಾಗೂ ಮರಕುಡಿ ಗ್ರಾಮಗಳಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಗುರುಪಾದ ಚೌಗಲಾ, ರಾಜು ಹುಕ್ಕೇರಿ, ಅಶೋಕ ಚೌಗಲಾ, ದುಂಡಪ್ಪ ಪಾಟೀಲ, ಡಾ. ಮಲ್ಲಿಕಾರ್ಜುನ ಖಾನಗೌಡರ, ಸದಾಶಿವ ಗೋಕಾಕ, ಚನ್ನಬಸಯ್ಯ ಹಿರೇಮಠ, ಈಶ್ವರ ಪಾಟೀಲ, ದುಂಡಪ್ಪ ಲಟ್ಟಿ, ಮಲ್ಲಪ್ಪ ಮುಶಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ