FoodsKannada NewsKarnataka NewsLife StyleNationalTravel

*ಸಿಲಿಂಡರ್ ಬೆಲೆ 183.50 ರೂ. ಇಳಿಕೆ*

ಪ್ರಗತಿವಾಹಿನಿ ಸುದ್ದಿ, ಮಧ್ಯ ಪ್ರಾಚ್ಯ ಸಂಘರ್ಷದಿಂದ ಏರಿಕೆಯಾಗಿದ್ದ ಸಿಲಿಂಡರ್ ಬೆಲೆಯಲ್ಲಿ ಇದೀಗ ಭಾರಿ ಇಳಿಕೆಯಾಗಿದೆ.

ಇಂದಿನಿಂದ ಜಾರಿಗೆ ಬರುವಂತೆ ವಾಣಿಜ್ಯ ಬಳಕೆಯ  19 ಕೆ.ಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 183.50 ರೂ. ಇಳಿಕೆ ಮಾಡಲಾಗಿದೆ. 

ಈ ಮೂಲಕ 3,113.50 ರೂ. ಇದ್ದ ಸಿಲಿಂಡರ್ ಬೆಲೆ ಈಗ 2,930 ರೂ.ಗೆ ಇಳಿದಿದೆ. ಆದರೆ ತೈಲ ಕಂಪನಿಗಳು ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ 14.2 ಕೆಜಿ ತೂಕದ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಹೊರ್ಮುಜ್ ಜಲಸಂಧಿಯಿಂದ ಇಂಧನ ಪೂರೈಕೆ ವ್ಯತ್ಯಯವಾದ ಹಿನ್ನೆಲೆ ಭಾರತದಲ್ಲಿ ವಾಣಿಜ್ಯ ಎಲ್‌ಪಿಜಿ ದರವನ್ನು ನಾಲ್ಕು ಬಾರಿ ಏರಿಕೆ ಮಾಡಲಾಗಿದೆ. ಭಾರೀ ನಷ್ಟ ಅನುಭವಿಸುತ್ತಿದ್ದ ತೈಲ ಕಂಪನಿಗಳು ಮಾರ್ಚ್‌ನಲ್ಲಿ 144 ರೂ., ಏಪ್ರಿಲ್‌ನಲ್ಲಿ 195.50 ರೂ., ಮೇನಲ್ಲಿ 993 ರೂ. ಹಾಗೂ ಜೂನ್‌ನಲ್ಲಿ 42 ರೂ. ಏರಿಕೆ ಮಾಡಿದ್ದವು. ಒಟ್ಟು ನಾಲ್ಕು ಹಂತಗಳಲ್ಲಿ 1374.50 ರೂ. ಏರಿಕೆಯಾಗಿತ್ತು. 

Home add -Advt

ಈ ಸಮಯದಲ್ಲಿ 14.2 ಕೆ.ಜಿ ಗೃಹಬಳಕೆಯ ಎಲ್‌ಪಿಜಿ ದರವನ್ನು ಎರಡು ಬಾರಿ ಏರಿಕೆ ಮಾಡಲಾಗಿದೆ. ಮಾರ್ಚ್‌ನಲ್ಲಿ 60 ರೂ. ಹಾಗೂ ಜೂನ್‌ನಲ್ಲಿ 29 ರೂ. ಹೆಚ್ಚಿಸಿ, ಒಟ್ಟು 89 ರೂ. ಏರಿಸಲಾಗಿದೆ.

ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ ಮೇಲಿನ ನಿರ್ಬಂಧ ತೆರವುಗೊಳಿಸಿದ ಬೆನ್ನಲ್ಲೇ ಕೇಂದ್ರದಿಂದ ಬೆಲೆ ಕಡಿತ ಮಾಡಲಾಗಿದೆ. 

Related Articles

Back to top button