Latest

ಸವದತ್ತಿ ತಾಲೂಕು ಸೊಗಲದ ಯೋಧ ಸಾವು; ಸ್ವಗ್ರಾಮದಲ್ಲಿ ನಡೆದ ಅಂತ್ಯಸಂಸ್ಕಾರ

ಪ್ರಗತಿವಾಹಿನಿ ಸುದ್ದಿ, ಸವದತ್ತಿ: ತಾಲೂಕಿನ ಸೊಗಲ ಗ್ರಾಮದ CRPF ಯೋಧ  ಮಲ್ಲಪ್ಪ ವಿಠ್ಠಲ ಕಾಂಬಳೆ (45) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದ ಮುದಖೇಡದ CRPF CTC ಯಲ್ಲಿ ಸೇವೆಯಲ್ಲಿದ್ದ ಅವರು, ಅವರು ನಿನ್ನೆ ಕ್ಯಾಂಪ್ ನಲ್ಲೇ ಮೃತಪಟ್ಟಿದ್ದರು.

ಇಂದು ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ಸೊಗಲಕ್ಕೆ ತಂದು ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ತಾಲೂಕು ಆಡಳಿತದ ಅಧಿಕಾರಿಗಳು, ಪೊಲೀಸ್ ಹಾಗೂ CRPF ಹಿರಿಯ ಅಧಿಕಾರಿಗಳು  ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. ಮಲ್ಲಪ್ಪ ಅವರ ತಂದೆ ವಿಠ್ಠಲ, ತಾಯಿ ನೀಲವ್ವ, ಪತ್ನಿ ಹೇಮವ್ವ, ಪುತ್ರ ಪ್ರಶಾಂತ್, ಪುತ್ರಿ ಮಾಲತಿ ಸೇರಿದಂತೆ ಕುಟುಂಬಸ್ಥರು, ಹಿತೈಷಿಗಳು ಹಾಗೂ ಗ್ರಾಮದ ನೂರಾರು ಜನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

Home add -Advt

ಇದೇ ವೇಳೆ CRPF ವತಿಯಿಂದ ಯೋಧ ಮಲ್ಲಪ್ಪ ಅವರಿಗೆ ಗೌರವ ನಮನ ಸಲ್ಲಿಸಲಾಯಿತು.

*ಮುಖ್ಯಮಂತ್ರಿಗಳ ಟ್ವೀಟ್ ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ*

https://pragati.taskdun.com/cm-basavaraj-bommaipm-narendra-moditweet/

ಕನ್ನಡ ಪರ ಹೋರಾಟಗಾರರಿಗೆ ರೌಡಿಶೀಟರ್ ಪಟ್ಟ! ಸರಕಾರದ ವಿರುದ್ಧ ಸಿಡಿದೆದ್ದ ಕನ್ನಡಿಗರು

https://pragati.taskdun.com/pro-kannada-fighters-are-rowdy-sheeters/

*ಗೃಹ ಸಚಿವರಿಗೆ ರಕ್ಷಣೆ ಇಲ್ಲ ಅಂದ್ರೆ ಜನರ ಪರಿಸ್ಥಿತಿಯೇನಿರಬಹುದು?; ಡಿ.ಕೆ.ಶಿವಕುಮಾರ್ ಪ್ರಶ್ನೆ*

https://pragati.taskdun.com/d-k-shivakumarreactionamith-shahmangalore-visit/

Related Articles

Back to top button