Kannada NewsKarnataka News

ಪರಿಸರ ಉಳಿಸಿ, ಮಾನವಕುಲ ರಕ್ಷಿಸಿ – ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ – ಪರಿಸರ ನಾಶದಿಂದಾಗಿ ಇಂದು ಹಲವಾರು ರೀತಿಯ ಅಪಾಯವನ್ನು ಎದುರಿಸುತ್ತಿದ್ದೇವೆ. ಪರಿಸರವನ್ನು ಉಳಿಸಿ, ಬೆಳೆಸುವ ಮೂಲಕ ಮಾನವ ಕುಲವನ್ನು ರಕ್ಷಿಸಬೇಕಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕರೆ ನೀಡಿದ್ದಾರೆ.
ಕುವೆಂಪುನಗರದಲ್ಲಿ ಶುಕ್ರವಾರ ಗಿಡ ನೆಡುವ ಮೂಲಕ ಪರಿಸರ ದಿನ ಆಚರಿಸಿ ಅವರು ಮಾತನಾಡುತ್ತಿದ್ದರು. ಗಿಡ, ಮರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದರಿಂದ ಪರಿಸರ ನಾಶವಾಗುತ್ತಿದೆ. ವಿವಿಧ ರೀತಿಯ ಮಾರಕ ಕಾಯಿಲೆಗಳು ಬರುತ್ತಿವೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದರೆ, ಮಾನವ ಕುಲವನ್ನು ಉಳಿಸಬೇಕಾದರೆ ಪರಿಸರ ರಕ್ಷಣೆ ಅನಿವಾರ್ಯ ಎಂದು ಅವರು ಹೇಳಿದರು.
ಕೊರೋನಾ ಅಪಾಯದ ಇಂದಿನ ದಿನಗಳಲ್ಲಿ ಯಾರೂ ದೂರ ಹೋಗಿ ಗಿಡ ನೆಡಬೇಕಾಗಿಲ್ಲ. ಪ್ರತಿಯೊಬ್ಬರೂ ಅವರಿರುವ ಪರಿಸರದಲ್ಲಿಯೇ ಗಿಡನೆಡಬಹುದು. ಕೇವಲ ಒಂದು ದಿನಕ್ಕೆ ಇದನ್ನು ಸೀಮಿತಗೊಳಿಸದೆ ನಿರಂತರವಾಗಿ ನಾವು ಪರಿಸರ ಕಾಳಜಿ ಹೊಂದಿರಬೇಕು ಎಂದು ಲಕ್ಷ್ಮಿ ಹೆಬ್ಬಾಳಕರ್ ಕರೆ ನೀಡಿದರು.
ಚನ್ನರಾಜ ಹಟ್ಟಿಹೊಳಿ, ಯುವರಾಜ ಕದಂ, ಮೃಣಾಲ ಹೆಬ್ಬಾಳಕರ್ ಮೊದಲಾದವರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button