Kannada NewsLatest

ಮುಸ್ಕಾನ್ ಳನ್ನು ಹೊಗಳಿದ ಉಗ್ರ ಅಲ್ ಜವಾಹಿರಿ; ತನಿಖೆಗೆ ಪ್ರಮೋದ್ ಮುತಾಲಿಕ್ ಆಗ್ರಹ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಳನ್ನು ಅಲ್ ಖೈದಾ ಉಗ್ರ ಅಲ್ ಜವಾಹಿರಿ ಹೊಗಳಿರುವುದು ಖಂಡನೀಯ ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಹಿಜಾಬ್ ಸಂಘರ್ಷದ ವೇಳೆ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದಳು. ಅದಾದ ಬಳಿಕ ಮಹಾರಾಷ್ಟ್ರದ ಮುಸ್ಲಿಂ ಶಾಸಕರು ಮುಸ್ಕಾನ್ ಳಿಗೆ ಮೊಬೈಲ್ ನೀಡಿದ್ದಾರೆ. ಈಗ ಅಲ್ ಜವಾಹಿರಿ ವಿದ್ಯಾರ್ಥಿನಿಯನ್ನು ಶ್ಲಾಘಿಸಿದ್ದಾನೆ ಈ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.

Home add -Advt

ಮುಸ್ಕಾನ್ ಭಾರತದ ಶ್ರೇಷ್ಠ, ಧೈರ್ಯಶಾಲಿ ಮಹಿಳೆ ಎಂದು ಉಗ್ರ ಜವಾಹಿರಿ ವಿಡಿಯೋ ರವಾನಿಸಿದ್ದಾನೆ. ಈ ವಿಡಿಯೋ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
2 ಕೋಟಿ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್

Related Articles

Back to top button