Kannada NewsKarnataka NewsLatest

*ಕಂಠಪೂರ್ತಿ ಕುಡಿದು ಶಾಲಾ ಬಸ್ ಚಲಾವಣೆ; ಭೀಕರ ಅಪಘಾತಕ್ಕೆ ಪಾದಚಾರಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಾಲಾ ವಾಹನಗಳಲ್ಲಿ ಮಕ್ಕಳನ್ನು ಕಳುಹಿಸಲು ಭಯ ಪಡಬೇಕಾದ ಸ್ಥಿತಿ ಬಂದಿದೆ. ಕುಡಿದ ಮತ್ತಿನಲ್ಲಿ ಶಾಲಾ ಬಸ್ ಓಡಿಸಿದ ಚಾಲಕನ ಹುಚ್ಚಾಟಕ್ಕೆ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ದೊಡ್ಡಬಾಣಸವಾಡಿಯಲ್ಲಿ ನಡೆದಿದೆ.

Home add -Advt

ಕುಡಿದ ಅಮಲಿನಲ್ಲಿಯೇ 25 ಮಕ್ಕಳನ್ನು ಶಾಲಾ ಬಸ್ ನಲ್ಲಿ ಕರೆತಂದ ಚಾಲಕ, ದೊಡ್ಡಬಾಣಸವಾಡಿ ಬಳಿ ಆಂಜನಪ್ಪ ಎಂಬ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದಲ್ಲಿ ಆಂಜನಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಂಜನಪ್ಪ ಮೃತಪಟ್ಟಿದ್ದಾರೆ.

ಅಕ್ಟೋಬರ್ 10ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ಶಾಲಾ ವಾಹನ ಚಾಲಕನನ್ನು ಬಂಧಿಸಿದ್ದಾರೆ.

Related Articles

Back to top button