Politics

*ಜಾತಿಗಣತಿ ಬಗ್ಗೆ ಚರ್ಚೆ ಮಾಡಲು ದಿನಾಂಕ ನಿಗದಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ತೀರ್ವ ಚರ್ಚೆಗೆ ಕಾರಣವಾಗಿರುವ ಜಾತಿ ಗಣತಿ ವರದಿಗೆ ಎಲ್ಲಡೆ ವಿರೋಧ ವ್ಯಕ್ತವಾಗುತ್ತಿರುವ ಕಾರಣ ಅಂತಿಮವಾಗಿ ಚರ್ಚೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. 

ಜಾತಿಗಣತಿ ವರದಿ ಬಗ್ಗೆ ಎಲ್ಲ ಸಚಿವರ ಅಭಿಪ್ರಾಯಗಳನ್ನು ಸಂಗ್ರಹಿಸಲು ಇಂದು ಸಿಎಂ ಸಿದ್ದರಾಮಯ್ಯ ಅವರು ಕರೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು, ಮೇ.2 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮವಾಗಿ ಜಾತಿಗಣತಿ ವರದಿ ಬಗ್ಗೆ ಚರ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

Home add -Advt

ಸೌಹಾರ್ದಯುತವಾಗಿ ಸಭೆಯಲ್ಲಿ ಚರ್ಚೆ ನಡೆದಿದೆ. ಆದರೆ ಜಾತಿಗಣತಿ ಬಗ್ಗೆ ಅಪೂರ್ಣವಾಗಿ ಮಾತುಕತೆ ಆಗಿದೆ. ಹೀಗಾಗಿ ಮುಂದಿನ ಸಚಿವ ಸಂಪುಟ ಸಭೆಯು ಏ.24ರಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಲಿದೆ. ಸಚಿವರ ಅಭಿಪ್ರಾಯಗಳನ್ನು ಲಿಖಿತ ರೂಪದಲ್ಲಿ ಆ ಸಭೆಯಲ್ಲಿ ನೀಡುವಂತೆ ಸಿಎಂ ಸೂಚಿಸಿದ್ದಾರೆ ಎಂದರು.

ಈಗಾಗಲೇ ಜಾತಿ ಗಣತಿ ಸಮೀಕ್ಷೆಯ ವರದಿ ಮಂಡನೆಯಾಗಿದ್ದು ಅಂತಿಮ ನಿರ್ಣಯಬಾಕಿ ಇದೆ. ಇಂದಿನ ಸಭೆಯಲ್ಲಿ ಕೆಲಸ ಸಮುದಾಯದ ಸಚಿವರು ವರದಿಯಲ್ಲಿ ಅಂಕಿ-ಅಂಶಗಳಲ್ಲಿ ವ್ಯತ್ಯಾಸವಾಗಿದೆ ಎಂದು ಪ್ರಶ್ನೆ ಎತ್ತಿದ್ದಾರೆದ್ದಾರೆ. ಇದು ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷೆ. ವರದಿಯ ಬಗ್ಗೆ ಮಾಹಿತಿ ಸೋರಿಯಾಗಿರುವ ಬಗ್ಗೆ ಈಗ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಪಾಟೀಲರು ಮಾಹಿತಿ ನೀಡಿದರು.

Related Articles

Back to top button