Kannada NewsKarnataka NewsLatest

*ಹಲ್ಲೆ ಪ್ರಕರಣ: ಚಿಕಿತ್ಸೆ ಫಲಕಾರಿಯಾಗದೇ ಸಮಾಜ ಕಲ್ಯಾಣ ಇಲಾಖೆ SDA ಅಂಜಲಿ ಸಾವು*

ಪ್ರಗತಿವಾಹಿನಿ ಸುದ್ದಿ: ಯಾದಗಿರುಯಲ್ಲಿ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಶಹಬಾದ್ ನ ಮಾಜಿ ನಗರಸಭೆ ಅಧ್ಯಕ್ಷೆ ಹಾಗೂ ಸಮಾಜಕಲ್ಯಾಣ ಇಲಾಖೆ ಎಸ್ ಡಿಎ ಅಂಜಲಿ ಕಂಬಾನೂರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

38 ವರ್ಷದ ಅಂಜಲಿ ಹಲ್ಲೆಯಿಂದಾಗಿ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನವೆಂಬರ್ ೧೨ರಂದು ಬೆಳಿಗ್ಗೆ ಎಂದಿನಂತೆ ಕಚೇರಿಗೆ ಹೋಗಿದ್ದ ಅಂಜಲಿ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಅಂಜಲಿ ಕಲಬುರಗಿಯ ಶಹಬಾದ್ ನಿವಾಸಿ. ಎರದು ವರ್ಷಗಳ ಹಿಂದೆ ಅಂಜಲಿ ಪತಿ ಗಿರೀಶ್ ಕಂಬಾನೂರ್ ಅವರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದರು. ಅನುಕಂಪದ ನೇಮಕಾತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅಂಜಲಿ ಅವರಿಗೆ ಉದ್ಯೋಗ ಸಿಕ್ಕಿತ್ತು.

Home add -Advt

ಹಲ್ಲೆ ಪ್ರಕರಣ ಸಂಬಂಧ ಯಾದಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Related Articles

Back to top button