ಹಿರಿಯ ನ್ಯಾಯವಾದಿ ರಾಮ್ ಜೇಟ್ ಮಲಾನಿ ನಿಧನ
ಪ್ರಗತಿವಾಹಿನಿ ಸುದ್ದಿ, ನವದೆಹಲಿ –
ಹಿರಿಯ ನ್ಯಾಯವಾದಿ, ಕೇಂದ್ರದ ಮಾಜಿ ಸಚಿವ ರಾಮ್ ಜೇಟ್ ಮಲಾನಿ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.
6 ಮತ್ತು 7ನೇ ಲೋಕಸಭೆಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಅವರು ಕೇಂದ್ರದ ಕಾನೂನು ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದರು. 2017ರವರೆಗೂ, ಅಂದರೆ, 94ನೇ ವಯಸ್ಸಿನವರೆಗೂ ವಕೀಲರಾಗಿ ವಾದಮಂಡಿಸಿ ನಂತರ ನಿವೃತ್ತರಾಗಿದ್ದರು. ದೇಶದ ಅತೀ ಹೆಚ್ಚು ಸಂಭಾವನೆ ಪಡೆಯುವ ನ್ಯಾಯವಾದಿ ಎನಿಸಿದ್ದರು.
ಅನೇಕ ಬಾರಿ ತೀರಾ ವಿವಾದಿತ ವ್ಯಕ್ತಿಗಳ ಪರ ವಕಾಲತ್ತು ವಹಿಸಿ ವಿವಾದಕ್ಕೂ ಅವರು ಒಳಗಾಗಿದ್ದಿದೆ. ತಮ್ಮ ವಕೀಲಿ ದಂಧೆ ಪಕ್ಕಾ ಪ್ರೊಫೇಶನಲ್ ಎಂದು ಸಮರ್ಥಿಸಿಕೊಳ್ಳುತ್ತಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ