ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸ್ಥಳೀಯ ಆಂಜನೇಯ ನಗರ ನಿವಾಸಿ ನಿವೃತ್ತ ಉಪ ಪ್ರಾಚಾರ್ಯ ಶೇಷಗಿರಿ ಮುತಾಲಿಕದೇಸಾಯಿ ಅವರು ಡಿಸೆಂಬರ್ ೧೬ ರಂದು ರಾತ್ರಿ ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು. ಅವರಿಗೆ ೬೮ ವರ್ಷ ವಯಸ್ಸಾಗಿತ್ತು.
ಸೇವಾ ನಿವೃತ್ತಿ ನಂತರ ಪ್ರತಿಭಾ ನಾಟ್ಯ ಸಂಘ ಸ್ಥಾಪಿಸಿ ಅದರ ಅಧ್ಯಕ್ಷರಾಗಿ ರಂಗಭೂಮಿ ಕ್ಷೇತ್ರದಲ್ಲಿ ತಮ್ಮದೇಯಾದ ಕೊಡುಗೆ ನೀಡಿದ್ದರು. ಸ್ವಂತ ಹಾಡುಗಳನ್ನು ರಚಿಸಿ ಹಾರ್ಮೋನಿಯಂ ವಾದನದ ಜೊತೆಗೆ ಸಂಗೀತ ಸೇವೆ ನೀಡುತ್ತಿದ್ದರು. ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಛಾಪು ಮೂಡಿಸಿಕೊಂಡಿದ್ದ ಅವರು ಕವನ ಸಂಕಲನ ಹೊರ ತಂದಿದ್ದರು.
ಮೃತರು ಧರ್ಮಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.
ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಮೃತರ ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು.
ಖ್ಯಾತ ಸಂಗೀತ ಕಲಾವಿದ ಶ್ರೀರಂಗ ಜೋಶಿ, ಬಸವರಾಜ ಕಮ್ಮಾರ, ಮಲ್ಲಿಕಾರ್ಜುನ ಶಿರಗುಪ್ಪಿ ಶೆಟ್ಟರ, ಶರಣಪ್ಪ ಗೋಂಗಡ ಶೆಟ್ಟರ, ಶಂಕರ ಬೇವಿಗಿಡದ, ಗೋಪಾಲ ಖಟಾವಕರ, ಬಸವರಾಜ ಮಠದ, ಹನುಮಂತ ಸಂಶಿ, ಬಾಳು ಬೆನಕೆ ಸೇರಿದಂತೆ ಅನೇಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
*ಮೂವರು ವಿದ್ಯಾರ್ಥಿಗಳು ನೀರುಪಾಲು*
https://pragati.taskdun.com/3-studentdeathvijayanagara/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ