Belagavi NewsBelgaum NewsKannada NewsKarnataka News

*ಬೆಳಗಾವಿಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ: ಶಾಲಾ ವಾಹನ ಚಾಲಕನಿಂದ ಕೃತ್ಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾಸಗಿ ಶಾಲಾ ವಾಹನ ಚಾಲಕ ನಾಲ್ಕು ವರ್ಷದ ಬಾಲಕಿಯ ಗುಪ್ತಾಂಗಗಳನ್ನು ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಡಗಾಂವ ನಗರದ ಪಾಟೀಲ ಗಲ್ಲಿಯ ನಿವಾಸಿ ಕೃಷ್ಣಾ ರಾಜಗೋಳಕರ(50) ಕೃತ್ಯ ವೆಸಗಿದ ಆರೋಪಿ ಎನ್ನಾಲಾಗಿದೆ. ಬಾಲಕಿಯು ಹಿಂದವಾಡಿಯಲ್ಲಿನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾಳೆ. ಆರೋಪಿಯು ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ವಾಹನ ಚಾಲಕ. ಬಾಲಕಿಯನ್ನು ಶಾಲೆಯಲ್ಲಿ ಶೌಚಾಲಯಕ್ಕೆ ಕರೆದೊಯ್ದು ಲೈಂಗಿಕ ಕರುಕುಳ ನೀಡಿದ್ದಾನೆ ಎನ್ನಲಾಗಿದೆ.

Home add -Advt

ಬಾಲಕಿ ಶಾಲಾ ವಾಹನದಲ್ಲಿ ಶಾಲೆಗೆ ಹೋಗುವುದಿಲ್ಲವೆಂದು ಭಯದಿಂದ ಹೆಳುತ್ತಿದ್ದಳು. ಕೆಲದಿನಗಳಿಂದ ಭಯದಲ್ಲಿ ಇದ್ದ ಅವಳನ್ನು ವಿಚಾರಿಸಿದಾಗ ಅವಳು ನಡೆದಿರುವ ಘಟನೆಯ ಕುರಿತು ವಿವರಿಸಿದ್ದಾಳೆ ಎಂದು ಸಂತ್ರಸ್ತೆಯ ತಾಯಿ ಟಿಳಕವಾಡಿ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

Related Articles

Back to top button